ಅಲಫುಝ: ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಸಿ ಮಹಿಳೆಯೊಬ್ಬಳು ಬಿಎಸ್ಎನ್ಎಲ್ ಟವರ್ ಏರಿದ ಘಟನೆ ನೆರೆ ರಾಜ್ಯ ಕೇರಳದಲ್ಲಿ ನಡೆದಿದೆ.
ಅಲಫುಝ ಜಿಲ್ಲೆಯ ಕಯಮಕುಲಮ್ನಲ್ಲಿ ಮೊಬೈಲ್ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ.
ಟವರ್ ಮೇಲೇರಿರುವ ಮಹಿಳೆಯನ್ನು ಕೆಳಗಿಳಿಯುವಂತೆ ಒತ್ತಾಯಿಸಿದ್ದಾರೆ. ಮಹಿಳೆ ಮಾತ್ರ ಇಳಿಯದೇ ತಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿದ್ದಾಳೆ. ಈಕೆ ಟವರ್ ಏರಲು ಕಾರಣ ಇಷ್ಟೇ… ಮಗುವನ್ನು ತನ್ನ ಪತಿ ಕರೆದುಕೊಂಡು ಹೋಗಿದ್ದು, ವಾಪಸ್ ಕೊಡದಿದ್ದರೆ ತಾನು ಪ್ರಾಣ ಬಿಡುವುದಾಗಿ ಹೇಳಿದ್ದಾಳೆ. ಇದೇ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಲು ಟವರ್ ಏರಿದ್ದಾಳೆ.
ಪೊಲೀಸರು ಎಷ್ಟೇ ಹೇಳಿದರೂ ಬಗ್ಗದ ಮಹಿಳೆಯ ವರ್ತನೆಯಿಂದ ಬೇಸತ್ತು ಕೊನೆಗೆ ಅಗ್ನಿಶಾಮಕ ಸಿಬ್ಬಂದಿಯನ್ನು ಕರೆಸಿದ್ದಾರೆ. ಆಕೆ ಹಾರಿದೂ ಪ್ರಾಣಕ್ಕೇನೂ ಆಗಬಾರದೆಂದು ಸುತ್ತಲೂ ದೊಡ್ಡ ಬಲೆಯನ್ನು ಹಾಕಿದ್ದರು. ಇದೇ ವೇಳೆ ಮಹಿಳೆ ಜಿಗಿದಿದ್ದಾಳೆ. ಈಕೆ ತಮಿಳುನಾಡು ಮೂಲದವಳಾಗಿದ್ದು, ಸದ್ಯ ಆರೋಗ್ಯ ಸ್ಥಿರವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಮಗುವನ್ನು ಕೊಡಿಸುವ ವಿಚಾರವಾಗಿ ಆಕೆಯ ಪತಿ ಜತೆ ಮಾತನಾಡುವುದಾಗಿಯೂ ಪೊಲೀಸರು ಭರವಸೆ ನೀಡಿದ್ದಾರೆ.