ವಿಟ್ಲ: ಬದಿಯಡ್ಕ ಠಾಣಾ ವ್ಯಾಪ್ತಿಯ ಕಳವು ಪ್ರಕರಣವೊಂದಕ್ಕೆ ಸಂಬಂಧಿಸಿ ವಿಟ್ಲ ಮೇಗಿನಪೇಟೆ ಗುಜುರಿ ಅಂಗಡಿಗೆ ಎಸ್. ಐ. ನೇತೃತ್ವದ ತಂಡ ದಾಳಿ ನಡೆಸಿದೆ.
ಪೆರ್ಲ ನಾರಾಯಣ ಪೂಜಾರಿ ಅವರು ಬದಿಯಡ್ಕ ಠಾಣೆಗೆ 40ಸಾವಿರ ಮೊತ್ತದ ಪಂಪ್ ಕಳವಾದ ಬಗ್ಗೆ ದೂರು ನೀಡಿದ್ದು, ಈ ಸಂಬಂಧ ಪೂವನಡ್ಕ ಗೋವಿಂದ ಎಂಬವರನ್ನು ವಶಕ್ಕೆ ಪಡೆದಿದ್ದು, ವಿಚಾರಣೆ ಸಂದರ್ಭ ಪಂಪನ್ನು ವಿಟ್ಲದ ಗುಜುರಿ ಅಂಗಡಿಗೆ 800ರೂ ಗೆ ಮಾರಾಟ ಮಾಡಿದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ.
ಎಸ್ ಐ ವಿನೋದ್ ಕುಮಾರ್ ನೇತೃತ್ವದ ತಂಡ ವಿಟ್ಲಕ್ಕೆ ಆರೋಪಿ ಸಹಿತ ಬಂದು ಅಂಗಡಿ ಹುಡುಕುವ ಸಂದರ್ಭ ಮೇಗಿನಪೇಟೆ ಇರ್ಷಾದ್ ಅವರಿಗೆ ಸೇರಿದ ಗುಜುರಿ ಅಂಗಡಿಯನ್ನು ತೋರಿಸಿದ್ದು, ಈಗ ಪಂಪ್ ತರುವವುದಾಗಿ ಹೇಳಿ ಹೋದ ವ್ಯಕ್ತಿ ಮರಳಿ ಬರಲಿಲ್ಲ. ಇದರಿಂದ ಇಲ್ಲಿದ್ದ ಇತರರನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ. ಕೆಲವು ಕಾಲ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಬಳಿಕ ಬದಿಯಡ್ಕ ಠಾಣೆಗೇ ಗುಜುರಿ ಅಂಗಡಿ ಮಾಲೀಕ ಆಗಮಿಸುವುದಾಗಿ ಹೇಳಿದ ಬಳಿಕೆ ಪೊಲೀಸರು ಅಲ್ಲಿಂದ ತೆರಳಿದ್ದಾರೆ. ವಿಟ್ಲ ಪೋಲೀಸರು ಸ್ಥಳಕ್ಕಾಗಮಿಸಿ ಮಾಹಿತಿ ಪಡೆದರು.