ಕಾಸರಗೋಡು: ರಾಜ್ಯದಾದ್ಯಂತ ನಿರ್ಗತಿಕ ಭೂರಹಿತರಿಗೆ ಭೂಮಿ ಒದಗಿಸುವ ಗುರಿಯನ್ನು ಸರ್ಕಾರ ಹೊಂದಿರುವುದಗಿ ಕೇರಳ ಕಂದಾಯ ಮತ್ತು ವಸತಿ ಸಚಿವ ಕೆ. ರಾಜನ್. ತಿಳಿಸಿದ್ದಾರೆ. ಅವರು ವೆಳ್ಳರಿಕುಂಡ್ ತಾಲೂಕು ಮಟ್ಟದ ಭೂಮಿಯ ಹಕ್ಕುಪತ್ರ ವಿತರಣಾ ಮೇಳ, ವೆಳ್ಳರಿಕುಂಡ್ ತಾಲೂಕು ಇ-ಕಚೇರಿ ಹಾಗೂ ಮಾಲೋತ್ ಸ್ಮಾರ್ಟ್ ವಿಲೇಜ್ ಕಚೇರಿಯ ಉದ್ಘಾಟನೆಯನ್ನು ಅನ್‍ಲೈನ್‍ಮೂಲಕ ನೆರವೇರಿಸಿ ಮಾಥನಾಡಿದರು. ಸಚಿವರು ಉದ್ಘಾಟಿಸಿದರು. ಕೇರಳದಲ್ಲಿ ಇನ್ನೂ ಅನೇಕ ಜನರು ಭೂರಹಿತರಾಗಿದ್ದಾರೆ. ಜಾಗ ಹಂಚಿಕೆಗಿರುವ ತೊಡಕುಗಳನ್ನು ಪರಿಹರಿಸಿಕೊಂಡು, ಸಾಧ್ಯವಾದಷ್ಟು ಜನರಿಗೆ ಭೂಮಿ ನೀಡಲು ಸರ್ಕಾರ ಎಲ್ಲ ಪ್ರಯತ್ನ ನಡೆಸುತ್ತಿದೆ. ಪ್ರಸಕ್ತ ಸರ್ಕಾರದ ವಶದಲ್ಲಿ ಇಷ್ಟೊಂದು ಜಾಗ ಲಭ್ಯವಿಲ್ಲದ ಕಾರಣ, ರಾಜ್ಯದಲ್ಲಿ ಅಕ್ರಮವಾಗಿ ವಶಪಡಿಸಿಕೊಂಡಿರುವ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಳ್ಳಲಿದೆ ಎಂದು ಸಚಿವರು ತಿಳಿಸಿದರು.
ವೆಳ್ಳರಿಕ್ಕುಂಡು ತಾಲೂಕಿನಲ್ಲಿ 216 ಪಟ್ಟಾ ವಿತರಿಸಲಾಯಿತು. ಮಾಲೋತ್ ಸ್ಮಾರ್ಟ್ ವಿಲೇಜ್ ಕಚೇರಿ ಕಟ್ಟಡ ಹಾಗೂ ವೆಳ್ಳರಿಕುಂಡ್ ತಾಲೂಕು ಇ-ಕಚೇರಿಯನ್ನು ಸಚಿವರು ಉದ್ಘಾಟಿಸಿದರು. ಶಾಸಕ ಇ. ಚಂದ್ರಶೇಖರ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರ್ ಚಂದ್, ಎಡಿಎಂ ಕೆ.ರಮೇಂದ್ರನ್, ಅಪರ ಜಿಲ್ಲಾಧಿಕಾರಿ ಡಿ.ಆರ್.ಮೇಘಶ್ರೀ, ಬಳಾಲ್ ಗ್ರಾಪಂ ಅಧ್ಯಕ್ಷ ರಾಜು ಕಟ್ಟಕಾಯಂ, ವೆಳ್ಳರಿಕುಂಡು ತಹಸೀಲ್ದಾರ್ ಪಿ.ವಿ. ಮುರಳಿ, ಬಳಾಲ್ ಗ್ರಾಪಂ ಸದಸ್ಯ ಜೆಸ್ಸಿ ಚಾಕೋ ಹಾಗೂ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಟಿ.ಪಿ. ತಂಬಾನ್, ವಿ.ಕೆ.ಚಂದ್ರನ್, ಎನ್.ಡಿ.ವಿನ್ಸೆಂಟ್, ಎ.ಸಿ. ಎ. ಲತೀಫ್, ಜಾಯ್ ಪೆÇಂಡಾನತ್ ಉಪಸ್ಥಿತರಿದ್ದರು.