ಕುಂಬಳೆ: ಮೊಬೈಲ್ ಎಂಬ ಮಾಯಾಲೋಕದಲ್ಲಿ ಮುಳುಗುವ ಮಕ್ಕಳು ನಮ್ಮ ಧಾರ್ಮಿಕ ಪ್ರಜ್ಞೆಯನ್ನು ಮರೆಯುತ್ತಿದ್ದಾರೆ. ಅವರಿಗೆ ಜಾಗೃತಿ ಮೂಡಿಸಿ ಧಾರ್ಮಿಕ ಶ್ರದ್ಧಾ ಕೇಂದ್ರ, ಆರಾಧನೆ ಹಾಗೂ ಆಚರಣೆಗಳ ಬಗ್ಗೆ ತಿಳಿಯಪಡಿಸಿ ಪ್ರಜ್ಞಾವಂತರನ್ನಾಗಿ ಮಾಡುವುದು ರಕ್ಷಕರಾದ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಮೂಡಬಿದ್ರೆ ಆಳ್ವಾಸ್ ಆಯುರ್ವೇದ ಮೆಡಿಕಲ್ ಕಾಲೇಜಿನ ಪ್ರಾಧ್ಯಾಪಕ ಡಾ.ಅನಿಲ್ ಕುಮಾರ್ ರೈ ಅಭಿಪ್ರಾಯಪಟ್ಟರು.
ಅವರು ಕುದ್ರೆಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವದ ಚತುರ್ಥ ದಿನ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸಗೈದು ಮಾತನಾಡಿದರು.
ಸನಾತನ ಧಾರ್ಮಿಕ ಸಂಸ್ಕøತಿಗೆ ತನ್ನದೇ ಆದ ಇತಿಹಾಸ, ದೃಷ್ಟಾಂತವಿದೆ. ಅದು ಪುರಾಣ ವೇದಕಾಲದಿಂದಲೂ ಇಂದಿನವರೆಗೂ ನಿಯಮಿತವಾಗಿ ನಡೆದುಕೊಂಡು ಬಂದಿದೆ. ಇದು ಮುಂದುವರಿಯಬೇಕೆಂಬ ಉದ್ದೇಶದಿಂದ ಇಂದಿನ ಯುವ ಹಾಗೂ ಪುಟಾಣಿ ಮಕ್ಕಳಲ್ಲಿ ಧಾರ್ಮಿಕ ಒಲವು ಮೂಡಿಸುವುದು ಅತಿ ಅಗತ್ಯವಾಗಿದೆ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಧ್ಯಕ್ಷ ಮಹಾಬಲ ಶೆಟ್ಟಿ ಕುದ್ರೆಪ್ಪಾಡಿ ಅಧ್ಯಕ್ಷತೆ ವಹಿಸಿದ್ದರು. ಮಧೂರು ಗ್ರಾಮ ಪಂಚಾಯತಿ ಅಧ್ಯಕ್ಷ ಬಾಲಕೃಷ್ಣ ಕೂಡ್ಲು, ಉದ್ಯಮಿ ಎಸ್.ಎನ್. ಮಯ್ಯ ಬದಿಯಡ್ಕ, ಪೆರ್ಲ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಶಶಿಭೂಷಣ ಶಾಸ್ತ್ರಿ, ಮಧೂರು ಗ್ರಾ.ಪಂಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ರಾಧಾಕೃಷ್ಣ ಸೂರ್ಲು, ಉಮೇಶ್ ಗಟ್ಟಿ, ಸಿರಿಬಾಗಿಲು, ಶ್ರೀವಯನಾಟು ಕುಲವನ್ ದೈವಸ್ಥಾನದ ಕಾರ್ಯದರ್ಶಿ ರವೀಂದ್ರ ರೈ ಸಿರಿಬಾಗಿಲು, ಏಳ್ಕಾನ ಗುತ್ತು ರಘು ಶೆಟ್ಟಿ ಮಾಯಿಪ್ಪಾಡಿ, ಎಡನಾಡು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಜಯಂತ ಪಾಟಾಳಿ, ಪಟ್ಲ ಶ್ರೀ ಭಗವತೀ ಕ್ಷೇತ್ರದ ಅಧ್ಯಕ್ಷ ರಾಘವ ಕಡಂಬಳ, ರಾಮಣ್ಣ ಗಟ್ಟಿ ಮಧೂರು, ರವಿ ಪಟ್ಲ, ಸಾರಿಗೆ ಉದ್ಯಮಿ ಗಿರೀಶ್ ಕೂಡ್ಲು, ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಎನ್.ವೆಂಕಟ್ರಮಣ ಹೊಳ್ಳ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಕ್ಷೇತ್ರ ಸೇವಾ ಸಮಿತಿ ಕೋಶಾಧಿಕಾರಿ ಕೃಷ್ಣಮೋಹನ ಭಟ್ ಎಡಕ್ಕಾನ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎಂ ಅಶೋಕ್ ರೈ ವಂದಿಸಿದರು. ಬ್ರಹ್ಮಕಲಶೋತ್ಸವ ಪ್ರ. ಕಾರ್ಯದರ್ಶಿ ಸುಕುಮಾರ ಕುದ್ರೆಪ್ಪಾಡಿ ಕಾರ್ಯಕ್ರಮ ನಿರೂಪಿಸಿದರು.