ನವದೆಹಲಿ: ಈ ಬಾರಿಯ ಮುಂಗಾರಿನಲ್ಲಿ ದೇಶದಲ್ಲಿ ಈ ಹಿಂದೆ ಊಹಿಸಿದಕ್ಕಿಂತ ಹೆಚ್ಚಿನ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮಂಗಳವಾರ ಹೇಳಿದೆ.
ಈ ಮಾನ್ಸೂನ್ ಋತುವಿನ ಸರಾಸರಿ ಮಳೆಯು ದೀರ್ಘಾವಧಿಯ ಸರಾಸರಿಯ ಶೇ. 103 ರಷ್ಟು ಇರಲಿದೆ ಎಂದು ನಿರೀಕ್ಷಿಸಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆಯ ಮಹಾನಿರ್ದೇಶಕ ಮೃತ್ಯುಂಜಯ್ ಮೊಹಾಪಾತ್ರ ಸುದ್ದಿಗಾರರಿಗೆ ತಿಳಿಸಿದರು.
ಶೇ. 99 ರಷ್ಟು ಧೀರ್ಘ ಅವಧಿಯ ಸರಾಸರಿಯೊಂದಿಗೆ ದೇಶವು ಸಾಮಾನ್ಯ ಮಳೆಯನ್ನು ಪಡೆಯಲಿದೆ ಎಂದು ಕಳೆದ ಏಪ್ರಿಲ್ ನಲ್ಲಿ ಹವಾಮಾನ ಇಲಾಖೆ ಹೇಳಿತ್ತು. ದೇಶದ ಬಹುತೇಕ ಕಡೆಗಳಲ್ಲಿ ಉತ್ತಮವಾದ ಮಳೆಯ ಚಟುವಟಿಕೆ ಕಾಣಿಸುತ್ತಿದೆ ಎಂದು ಪ್ರಸ್ತುತ ಮಾನ್ಸೂನ್ ಋತುವಿನ ಮಳೆಯ ಮುನ್ಸೂಚನೆಯನ್ನು ಮೊಹಪಾತ್ರ ಬಿಡುಗಡೆ ಮಾಡಿದ್ದಾರೆ.
ಮಧ್ಯ ಮತ್ತು ಪರ್ಯಾಯ ದ್ವೀಪದ ಭಾರತವು ದೀರ್ಘಾವಧಿಯ ಸರಾಸರಿ ಶೇ. 106 ರಷ್ಟು ಮಳೆ ನಿರೀಕ್ಷಿಸಬಹುದು, ಆದರೆ ಈಶಾನ್ಯ ಪ್ರದೇಶವು ಸಾಮಾನ್ಯಕ್ಕಿಂತ ಕಡಿಮೆ ಮಳೆಯನ್ನು ಪಡೆಯಬಹುದು ಎಂದು ಅವರು ಹೇಳಿದರು.
ಮೇ 29 ರಂದು ಕೇರಳದ ಮೇಲೆ ಮಾನ್ಸೂನ್ ಪ್ರಾರಂಭವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಘೋಷಿಸಿತ್ತು. ಇದು ಸಾಮಾನ್ಯ ಆರಂಭದ ದಿನಾಂಕಕ್ಕಿಂತ ಮೂರು ದಿನ ಮುಂಚಿತವಾಗಿ ಪ್ರವೇಶವಾಗಲಿದೆ ಎಂದು ಹೇಳಿತ್ತು.