ನವದೆಹಲಿ: ಸೆಕ್ಷನ್ 124ಎ ಅಡಿಯಲ್ಲಿ ದೇಶದ್ರೋಹದ ನಿಬಂಧನೆಗಳನ್ನು ಮರುಪರಿಶೀಲನೆ ಮಾಡುವುದಾಗಿ ಸುಪ್ರೀಂ ಕೋರ್ಟ್ ಗೆ ಕೇಂದ್ರ ಸರ್ಕಾರ ಹೇಳಿದೆ.
ಶನಿವಾರದಂದು ದೇಶದ್ರೋಹಕ್ಕೆ ಸಂಬಂಧಿಸಿದಂತೆ ಇರುವ ದಂಡನೆಯ ಕಾನೂನು ಹಾಗೂ ಅದರ ಸಿಂಧುತ್ವವನ್ನು ಸಂವಿಧಾನ ಪೀಠ ಎತ್ತಿ ಹಿಡಿದಿದ್ದ 1962'ರ ತೀರ್ಪು 6 ದಶಕಗಳ ಸಮಯದ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದು, ಅದರ ದುರ್ಬಳಕೆಯ ಉದಾಹರಣೆಗಳು ಕಾನೂನಿನ ಮರುಪರಿಶೀಲನೆಗೆ ಸಮರ್ಥನೆಯಲ್ಲ ಎಂದು ಹೇಳಿತ್ತು.
ದೇಶದ್ರೋಹದ ಕಾನೂನಿನ ದುರ್ಬಳಕೆ ಬಗ್ಗೆ ಕಳೆದ ವರ್ಷದ ಜುಲೈ ನಲ್ಲಿ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿ ಮಹಾತ್ಮಾ ಗಾಂಧಿ ಅಂತಹವರನ್ನು ಸುಮ್ಮನಾಗಿರಿಸಲು ಬ್ರಿಟೀಷರು ಬಳಕೆ ಮಾಡುತ್ತಿದ್ದ ಕಾನೂನನ್ನು ಏಕೆ ರದ್ದುಗೊಳಿಸುತ್ತಿಲ್ಲ ಎಂದು ಕೇಳಿತ್ತು.