ತ್ರಿಶೂರ್: ಇಂದು ನಿಗದಿಯಾಗಿದ್ದ ತ್ರಿಶೂರ್ ಪೂರಂ ಭಾಗವಾದ ಸಿಡಿಮದ್ದು ಪ್ರದರ್ಶನ ಸಾಧ್ಯತೆ ಕ್ಷೀಣಿಸಿದೆ. ತ್ರಿಶೂರ್ ನಲ್ಲಿ ಭಾರೀ ಮಳೆಯಾಗುತ್ತಿದೆ.ಈ ಹಿನ್ನೆಲೆಯಲ್ಲಿ ಇಂದು ಮತ್ತೆ ನಡೆಸಲು ಉದ್ದೇಶಿಸಿದ್ದ ಸಿಡಿಮದ್ದು ಪ್ರದರ್ಶನ ನಡೆಯುವ ಸಾಧ್ಯತೆ ಕ್ಷೀಣಿಸಿದೆ. ಜಿಲ್ಲಾಧಿಕಾರಿ ಅನುಮತಿ ನೀಡಿದ್ದು, ಮಳೆಯಿಂದಾಗಿ ಮುಂದೂಡಲಾಗಿತ್ತು. ಮಳೆ ಮುಂದುವರಿದರೆ ಮತ್ತೆ ಮುಂದೂಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.
ಮೇ 11 ರಂದು ಮುಂಜಾನೆ 3 ಗಂಟೆಗೆ ತ್ರಿಶೂರ್ ಪೂರಂನಲ್ಲಿ ನಡೆಯಬೇಕಿದ್ದ ಪ್ರದರ್ಶನ ಭಾರೀ ಮಳೆಯಿಂದಾಗಿ ಮುಂದೂಡಲ್ಪಟ್ಟಿತ್ತು. ಸಂಜೆ 6:30ಕ್ಕೆ ನಡೆಯಬೇಕಿತ್ತು. ದೇವಸ್ವಂ ಜಂಟಿ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಿದ ಬಳಿಕ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ. ಇದಕ್ಕೂ ಮುನ್ನ ಭಾನುವಾರ ನಿರ್ಧರಿಸಲಾಗಿತ್ತು.