ಕಾಸರಗೋಡು: ಬೇಕಲ ಕೋಟೆಯಲ್ಲಿ ಅಗಸರಹೊಳೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆಯೋಜಿಸಿದ್ದ ರಜಾ ಶಿಬಿರದ ಅಂಗವಾಗಿ ಬೇಕಲ್ ಟೂರಿಸಂ ಫ್ರೆಟರ್ನಿಟಿ ಚೇರಮನ್ ಸೈಫುದ್ದೀನ್ ಕಳನಾಡ್ ಅವರು ಬೇಕಲ ಕೋಟೆ ಕುರಿತು ತರಗತಿ ನಡೆಸಿದರು. ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಬೇಕಲಕೋಟೆಯ ಬಗ್ಗೆ ಅರಿತುಕೊಳ್ಳೋಣ ಎಂಬ ಧ್ಯೇಯದೊಂದಿಗೆ ಕೋಟೆಯ ಸಮಗ್ರ ಮಾಹಿತಿಯನ್ನು ಈ ಸಂದರ್ಭ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಲಾಯಿತು. ಕೋಟೆ ನಿರ್ಮಾಣದ ಉದ್ದೇಶ, ಕೋಟೆಯ ರೂವಾರಿಗಳು ಸೇರಿದಂತೆ ಕೋಟೆಯ ಸಂಪೂರ್ಣ ಮಾಹಿತಿಯನ್ನು ಸೈಫುದ್ದೀನ್ ಕಳನಾಡ್ ಒದಗಿಸಿಕೊಟ್ಟರು. ಮುಖ್ಯಶಿಕ್ಷಕಿ ಶಶಿಕಲಾ, ಶಿಕ್ಷಕರಾದ ತ್ರಿಪುರಾ, ಗಾಯತ್ರಿ, ಮಾನ್ಶಿಕಾ ಶಿಬಿರದ ನೇತೃತ್ವ ವಹಿಸಿದ್ದರು.