ಕೋಲ್ಕತ್ತಾ: ಖಾಸಗಿ ವಲಯದ ವಿಮಾನಯಾನ ಸಂಸ್ಥೆ ಇಂಟರ್ ಗ್ಲೋಬ್ ಏವಿಯೇಷನ್ ಲಿಮಿಟೆಡ್ (ಇಂಡಿಗೋ) ವೆಂಕಟರಮಣಿ ಸುಮಂತ್ರನ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಪ್ರಸ್ತಾವನೆಗೆ ಕಂಪನಿಯ ನಿರ್ದೇಶಕರ ಮಂಡಳಿ ಅನುಮೋದನೆ ನೀಡಿದೆ.
ಡಾ. ಸುಮಂತ್ರನ್ ಅವರು ಮೇ 28, 2020ರಿಂದ ನಿರ್ದೇಶಕರ ಮಂಡಳಿಯಲ್ಲಿ ಸ್ವತಂತ್ರ ಕಾರ್ಯನಿರ್ವಾಹಕ ನಿರ್ದೇಶಕರ ಜವಾಬ್ದಾರಿ ಹೊಂದಿದ್ದರು. ಅವರು ಮೇ 30ರಂದು ಕೊನೆಗೊಂಡ ಮೆಲೆವಿಟಲ್ ದಾಮೋದರನ್ ಅವರ ಉತ್ತರಾಧಿಕಾರಿಯಾಗಲಿದ್ದಾರೆ.
ಇಂಡಿಗೋದ ವ್ಯವಸ್ಥಾಪಕ ನಿರ್ದೇಶಕ ರಾಹುಲ್ ಭಾಟಿಯಾ ಮಾತನಾಡಿ, ಡಾ. ಸುಮಂತ್ರನ್ ಅವರು ಅತ್ಯುತ್ತಮ ಉದ್ಯಮಿ ಮತ್ತು ಇಂಡಿಗೋ ನಿರ್ದೇಶಕರ ಮಂಡಳಿಯ ಹೆಚ್ಚಿನ ಅನುಭವಿ ಸದಸ್ಯರಾಗಿದ್ದಾರೆ. ನಮ್ಮ ಮಹತ್ವಕಾಂಕ್ಷೆಯ ಸಾಗರೋತ್ತರ ಪ್ರವಾಸ ವಿಸ್ತರಣೆಯ ಮುಂದಿನ ಹಂತಕ್ಕೆ ನಾವು ತಯಾರಿ ನಡೆಸುತ್ತಿರುವಾಗ ಡಾ. ಸುಮಂತ್ರನ್ ಅವರ ಅಂತಾರಾಷ್ಟ್ರೀಯ ಮಾರುಕಟ್ಟೆಗಳು ಮತ್ತು ವಿಶ್ವ ದರ್ಜೆಯ ಜಾಗತಿಕ ಅಭ್ಯಾಸಗಳ ತಿಳುವಳಿಕೆಯು ನಮಗೆ ಅತ್ಯುತ್ತಮ ಮಾರ್ಗದರ್ಶನ ನೀಡಲಿದೆ ಎಂದು ತಿಳಿಸಿದ್ದಾರೆ.