HEALTH TIPS

ಸಿಲ್ವರ್‍ಲೈನ್ ಬದಲಿಗೆ ಇ ಶ್ರೀಧರನ್ ಸಲ್ಲಿಸಿದ ಹೊಸ ಪ್ರಸ್ತಾವನೆ: ಕಾಲಾವಧಿ ಮತ್ತು ವೆಚ್ಚ ಕಡಿಮೆ: ವರದಿ ಕೇಂದ್ರಕ್ಕೆ

                          ಕೊಚ್ಚಿ: ಕೇರಳ ಸರ್ಕಾರದ ಕನಸಿನ ಯೋಜನೆ ಕೆ ರೈಲ್ ವಿರುದ್ಧ ಪ್ರತಿಭಟನೆ ತೀವ್ರಗೊಳ್ಳುತ್ತಿರುವಾಗಲೇ ಪರ್ಯಾಯ ಪ್ರಸ್ತಾವನೆಯೊಂದಿಗೆ ಮೆಟ್ರೋಮ್ಯಾನ್ ಇ ಶ್ರೀಧರನ್ ಹೇಳಿಕೆ ನೀಡಿದ್ದಾರೆ. ಪ್ರಸ್ತುತ ಯೋಜನೆಗೆ ಎದುರಾಗಿರುವ ಪ್ರಮುಖ ಟೀಕೆಗಳನ್ನು ನಿವಾರಿಸುವ ಪರ್ಯಾಯ ಮಾರ್ಗವನ್ನು ಇ ಶ್ರೀಧರನ್ ಪ್ರಸ್ತಾಪಿಸುತ್ತಿದ್ದಾರೆ. ಕೆ ರೈಲ್ ವಿರುದ್ಧ ಪ್ರತಿಭಟನೆ ನಡೆಸುತ್ತಿರುವವರು ಅಭಿವೃದ್ಧಿಗೆ ಅಡ್ಡಿ ಮಾಡುತ್ತಿದ್ದಾರೆ ಎಂಬ ಎಡಪಕ್ಷಗಳ ಟೀಕೆಯನ್ನು ಹೋಗಲಾಡಿಸುವ ಉದ್ದೇಶದಿಂದ ಬಿಜೆಪಿ ಹೊಸ ಪ್ರಸ್ತಾವನೆಗೆ ಮುಂದಾಗಿದೆ. ಪೆÇನ್ನಾನಿಯಲ್ಲಿರುವ ಇ ಶ್ರೀಧರನ್ ಅವರ ಮನೆಗೆ ಭೇಟಿ ನೀಡಿದ ನಂತರ ಕೇಂದ್ರ ಸಚಿವ ವಿ ಮುರಳೀಧರನ್ ಪರ್ಯಾಯ ಪ್ರಸ್ತಾವನೆಗೆ ಪ್ರತಿಕ್ರಿಯಿಸಿದರು.

                ಇ ಶ್ರೀಧರನ್ ಅವರು ಪ್ರಸ್ತುತ ರೈಲು ಮಾರ್ಗದ ಅಭಿವೃದ್ಧಿಯೊಂದಿಗೆ ವೇಗದ ಪ್ರಯಾಣವನ್ನು ಸಾಧ್ಯವಾಗಿಸುವ ಯೋಜನೆಯನ್ನು ಪ್ರಸ್ತಾಪಿಸುತ್ತಿದ್ದಾರೆ. ಜನರಿಂದ ಅಭಿಪ್ರಾಯ ಸಂಗ್ರಹಿಸಿ ಕೇಂದ್ರಕ್ಕೆ ಯೋಜನೆ ಸಲ್ಲಿಸಲು ತೀರ್ಮಾನಿಸಲಾಗಿದೆ.

                  ಇ ಶ್ರೀಧರನ್ ಅವರೊಂದಿಗಿನ ಸಭೆಯ ನಂತರ ಕೇಂದ್ರ ಸಚಿವ ವಿ ಮುರಳೀಧರನ್ ಅವರು ಪರ್ಯಾಯ ಪ್ರಸ್ತಾವನೆಗೆ ಮೊದಲು ಪ್ರತಿಕ್ರಿಯಿಸಿದರು. ಶ್ರೀಧರನ್ ಅವರ ಪರ್ಯಾಯ ಪ್ರಸ್ತಾಪವನ್ನು ಉಲ್ಲೇಖಿಸುವ  ಮೂಲಕ ವಿ.ಮುರಳೀಧರನ್ ತಮ್ಮ ಭಾಷಣವನ್ನು ಪ್ರಾರಂಭಿಸಿದರು, ಸಿಲ್ವರ್ ಲೈನ್ ಯೋಜನೆಯು ಕೇರಳದ ಮೇಲೆ ಭಾರಿ ಪರಿಸರದ ಪರಿಣಾಮ ಬೀರುತ್ತದೆ ಮತ್ತು ಹೆಚ್ಚಿನ ಜನಸಂಖ್ಯೆಯನ್ನು ಸ್ಥಳಾಂತರಿಸಬೇಕಾಗುತ್ತದೆ ಎಂದು ಹೇಳಿದರು. ಮುರಳೀಧರನ್ ಅವರು ಸಿಲ್ವರ್ ಲೈನ್ ಅಪ್ರಾಯೋಗಿಕ ಯೋಜನೆಯಾಗಿದೆ ಎಂದು ತಿಳಿಸಿದರು.

               ಕೇರಳಕ್ಕೆ ಅತಿ ವೇಗದ ರೈಲುಗಳ ಅಗತ್ಯವಿದೆ. ರಸ್ತೆ ದಟ್ಟಣೆ ತಪ್ಪಿಸಬೇಕು. ಇದಕ್ಕಾಗಿ ಪರ್ಯಾಯ ಪ್ರಸ್ತಾವನೆಗಳನ್ನು ರೈಲ್ವೆ ಇಲಾಖೆಗೆ ಸಲ್ಲಿಸಲಾಗುವುದು.  ರೈಲ್ವೆ ಇಲಾಖೆ ಎಲ್ಲರೊಂದಿಗೆ ಚರ್ಚಿಸಿ ಅಗತ್ಯ ನಿರ್ಧಾರ ಕೈಗೊಳ್ಳಲಿದೆ ಎಂದು ವಿ ಮುರಳೀಧರನ್ ಹೇಳಿರುವರು. 

                    ಇ ಶ್ರೀಧರನ್ ಅವರು ಎರಡು ರೀತಿಯ ಯೋಜನೆಗಳ ವಿವರವಾದ ವರದಿಯನ್ನು ಕೇಂದ್ರಕ್ಕೆ ಸಲ್ಲಿಸಲಿದ್ದಾರೆ. ಪ್ರಸ್ತುತ ರೈಲುಗಳ ವೇಗವನ್ನು ಹೆಚ್ಚಿಸುವುದು ಸೇರಿದಂತೆ ಅಲ್ಪಾವಧಿ ಮತ್ತು ದೀರ್ಘಾವಧಿಯ ಯೋಜನೆಗಳು ಚರ್ಚೆಯಲ್ಲಿವೆ. ಇ.ಶ್ರೀಧರನ್ ಮಾತನಾಡಿ, ಕಡಿಮೆ ವೆಚ್ಚದಲ್ಲಿ ತಕ್ಷಣವೇ ಕಾರ್ಯಗತಗೊಳಿಸಬಹುದಾದ ಯೋಜನೆಗಳು ಪರಿಗಣನೆಯಲ್ಲಿವೆ ಎಂದು ತಿಳಿಸಿದರು .

                   'ರಸ್ತೆ ದಟ್ಟಣೆ ಕಡಿಮೆ ಮಾಡಲು ಮೊದಲು ಅಲ್ಪಾವಧಿ ಯೋಜನೆ ಅಗತ್ಯವಿದೆ. ಯಾವುದೇ ಯೋಜನೆ ಬರಲು ದೀರ್ಘ ಕಾಲಾವಧಿ ಬೇಕಾಗುತ್ತದೆ. ಸಿಲ್ವರ್‍ಲೈನ್ ಯೋಜನೆ ಅನುಷ್ಠಾನಕ್ಕೆ ಐದು ವರ್ಷ ಸಾಕಾಗುವುದಿಲ್ಲ. ಇದು ಕನಿಷ್ಠ 12 ವರ್ಷಗಳನ್ನು ತೆಗೆದುಕೊಳ್ಳುತ್ತದೆ. ಕಡಿಮೆ ವೆಚ್ಚದಲ್ಲಿ ಯೋಜನೆಗಳನ್ನು ತ್ವರಿತವಾಗಿ ಅನುಷ್ಠಾನಗೊಳಿಸಬಹುದು ಎನ್ನುತ್ತಾರೆ ಅವರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries