ಅಬುದಭಿ: ಯುಎಇಯ ಬಹುಕಾಲ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರನ್ನು ಯುನೈಟೆಡ್ ಅರಬ್ ಎಮಿರೇಟ್ಸ್ ನ ಆಡಳಿತಗಾರರು ರಾಷ್ಟ್ರದ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆ ಮಾಡಿದ್ದಾರೆ.
ಅಬುಧಾಬಿಯ ಅಲ್ ಮುಶ್ರಿಫ್ ಪ್ಯಾಲೇಸ್‌ನಲ್ಲಿ ನಡೆದ ಸಭೆಯಲ್ಲಿ ದೇಶದ ಏಳು ಶೇಖ್‌ಡಮ್‌ಗಳ ಆಡಳಿತಗಾರರು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಸರ್ಕಾರಿ ವಾಮ್ ಸುದ್ದಿ ಸಂಸ್ಥೆ ತಿಳಿಸಿದೆ.
ಮಾಜಿ ನಾಯಕ ಶೇಖ್ ಖಲೀಫಾ ಅವರ ಮರಣದ ಒಂದು ದಿನದ ನಂತರ ಶೇಖ್ ಮೊಹಮ್ಮದ್ ಅವರನ್ನು ಫೆಡರಲ್ ಸುಪ್ರೀಂ ಕೌನ್ಸಿಲ್ ಆಯ್ಕೆ ಮಾಡಿದೆ. ಇವರು 1971 ರಲ್ಲಿ ಅವರ ತಂದೆ ಸ್ಥಾಪಿಸಿದ ತೈಲ ಸಮೃದ್ಧ ದೇಶದ ಆಡಳಿತಗಾರರಾಗಿ ಆಯ್ಕೆ ಆಗಿದ್ದರು.
“ನಾವು ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅವರಿಗೆ ಅಭಿನಂದನೆ ಸಲ್ಲಿಸುತ್ತೇವೆ ಮತ್ತು ಅವರೊಂದಿಗೆ ನಿಷ್ಠಾವಂತರಾಗಿ ಕೆಲಸ ಮಾಡಲು ಪ್ರತಿಜ್ಞೆ ಮಾಡುತ್ತೇವೆ ಮತ್ತು ನಮ್ಮ ಜನರು ಅವರಿಗೆ ನಿಷ್ಠೆಯಿಂಧ ಇರುವುದಾಗಿ ಪ್ರತಿಜ್ಞೆ ಮಾಡುತ್ತಾರೆ” ಎಂದು ದುಬೈನ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಮತದಾನದ ನಂತರ ಟ್ವೀಟ್ ಮಾಡಿದ್ದಾರೆ.