ಬೆಂಗಳೂರು: ಇತ್ತೀಚೆಗಂತೂ ನಕಲಿ ಫೇಸ್‌ಬುಕ್ ಅಕೌಂಟ್‌ಗಳ ಹಾವಳಿ ವಿಪರೀತ ಹೆಚ್ಚಾಗುತ್ತಿದೆ. ಅಮಾಯಕರನ್ನು ವಂಚನೆ ಮಾಡುವುದೇ ಇವುಗಳ ಮೂಲ ಕಸುಬು.
ಫೇಸ್‌ಬುಕ್‌ನಲ್ಲಿ 'ರತನ್ ಟಾಟಾ ಪೌಂಢೇಶನ್' ಹೆಸರಿನಲ್ಲಿ ಪೇಜ್ ಒಂದನ್ನು ತೆರೆಯಲಾಗಿದ್ದು ಈ ಬಗ್ಗೆ ತೀವ್ರ ಕಿಡಿಕಾರಿರುವ ರತನ್ ಟಾಟಾ ಅವರು, 'ಈ ಪೇಜ್ ನಕಲಿಯಾಗಿದ್ದು, ನಮ್ಮ ಸಹೋದ್ಯೋಗಿಗಳ ಹೆಸರಿನಲ್ಲಿ ಯೂಸರ್‌ನೇಮ ತೆಗೆದುಕೊಂಡು ಪೇಜ್ ಮಾಡಲಾಗಿದೆ. ಈ ಪೇಜ್‌ನ ಕಿಡಗೇಡಿಗಳು ಅಮಾಯಕರಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ದೂರುಗಳು ನನ್ನ ಗಮನಕ್ಕೆ ಬಂದಿವೆ. ನಾವು ಸಾರ್ವಜನಿಕರಿಂದ ಯಾವುದೇ ದೇಣಿಗೆ ಸ್ವೀಕರಿಸುವುದಿಲ್ಲ. ನಾವು ಈ ಬಗ್ಗೆ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಇಂತಹ ಪೇಜ್‌ಗಳು ಕಂಡು ಬಂದರೆ ನೀವು ಕೂಡ ಫೇಸ್‌ಬುಕ್‌ಗೆ ರಿಪೋರ್ಟ್ ಮಾಡಿ' ಎಂದು ಮನವಿ ಮಾಡಿಕೊಂಡಿದ್ದಾರೆ.
ಟಾಟಾ ಕಂಪನಿಗಳ ಬಗ್ಗೆ ಪೌಂಢೇಶನ್ ಬಗ್ಗೆ ಏನಾದರೂ ಅನುಮಾನ ಬಂದರೆ ಜನ Talktous@tatatrusts.org ಗೆ ಈಮೇಲ್ ಮಾಡುವ ಮೂಲಕ ಖಚಿತ ಪಡಿಸಿಕೊಳ್ಳಬಹುದು ಎಂದು ರತನ್ ಟಾಟಾ ಹೇಳಿದ್ದಾರೆ.
ರತನ್ ಟಾಟಾ ಅವರು ಹೇಳಿರುವ ನಕಲಿ ಫೇಸ್‌ಬುಕ್ ಪೇಜ್ ಇದೀಗ ಡಿಲೀಟ್ ಆಗಿರುವುದು ಕಂಡು ಬಂದಿತು.