ಕಾಸರಗೋಡು: ಎರಡನೇ ಪಿಣರಾಯಿ ವಿಜಯನ್ ಸರ್ಕಾರದ ಮೊದಲ ವಾರ್ಷಿಕೋತ್ಸವದ ಅ|ಂಗವಾಗಿ ಕಾಞಂಗಾಡ್ ಅಲಾಮಿಪಳ್ಳಿ ಬಸ್ ನಿಲ್ದಾಣ ಪರಿಸರದಲ್ಲಿ ಆಯೋಜಿಸಲಾದ ನನ್ನ ಕೇರಳ ವಸ್ತುಪ್ರದರ್ಶನ ಮತ್ತು ಮಾರುಕಟ್ಟೆ ಮೇಳದ ಅಂಗವಾಗಿ ಶೈಕ್ಷಣಿಕ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ಸಾರ್ವಜನಿಕ ಶಿಕ್ಷಣ ಇಲಾಖೆಯ ಆಶ್ರಯದಲ್ಲಿ ವಿಚಾರ ಸಂಕಿರಣವನ್ನು ಆಯೋಜಿಸಲಾಗಿತ್ತು. ಡಾ.ಪಿ.ವಿ. ಪುರುಷೋತ್ತಮನ್ ವಿಚಾರ ಸಂಕಿರಣದ ನೇತೃತ್ವ ವಹಿಸಿದ್ದರು.
ವಿಚಾರ ಸಂಕಿರಣದಲ್ಲಿ ಕೇರಳದಲ್ಲಿ ಜ್ಞಾನ ಸಮುದಾಯವನ್ನು ರೂಪಿಸಲು ಸಾರ್ವಜನಿಕ ಶಾಲೆಗಳನ್ನು ಬಲಪಡಿಸುವ ಅಗತ್ಯತೆ ಎಂಬುದು ಮುಖ್ಯ ವಿಷಯವಾಗಿತ್ತು. ಜಾಗತಿಕವಾಗಿ ಶಿಕ್ಷಣ ಮಾರುಕಟ್ಟೆ ಆಧಾರಿತವಾಗುತ್ತಿದೆ. ಇದು ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಪೈಪೆÇೀಟಿಗೆ ಕಾರಣವಾಗುತ್ತದೆ. ಅದಕ್ಕನುಗುಣವಾಗಿ ನಮ್ಮ ಸಾರ್ವಜನಿಕ ಶಿಕ್ಷಣ ಸಂಸ್ಥೆಗಳಿಗೆ ಮಕ್ಕಳು ಪೈಪೆÇೀಟಿಗೆ ಬರುವಂತೆ ಆಧುನೀಕರಣಗೊಳ್ಳಬೇಕು. ಅದಕ್ಕಾಗಿ ನಮ್ಮ ಶಿಕ್ಷಣ ಕಾರ್ಯಕರ್ತರು ಮಾಡಬೇಕಾದ ಚಟುವಟಿಕೆಗಳನ್ನು ವಿಚಾರ ಸಂಕಿರಣದ ಅಂಗವಾಗಿ ಪ್ರಸ್ತುತಪಡಿಸಿದ್ದೇವೆ. ಸಾಮಾನ್ಯ ಶಿಕ್ಷಣ ಯಜ್ಞದ ಮೂಲಕ ಕೇರಳದ ಶಾಲೆಗಳ ಮೂಲಸೌಕರ್ಯವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಈ ಬೆಳವಣಿಗೆಯನ್ನು ತರಗತಿಯಲ್ಲೂ ಅಳವಡಿಸಿ ಅಗತ್ಯ ಕೆಲಸ ಆಗಬೇಕು ಎಂದು ಸಂಘಟಕರು ತಿಳಿಸಿದರು.
ಕಾಸರಗೋಡು ಡಯಟ್ ಪ್ರಾಂಶುಪಾಲ ಡಾ. ಎಂ. ಬಾಲನ್ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದರು. ಕಾಸರಗೋಡು ಶಿಕ್ಷಣ ಉಪನಿರ್ದೇಶಕ ಕೆ.ವಿ ಪುಷ್ಪಾ ಸ್ವಾಗತಿಸಿ, ಜಿಲ್ಲಾ ಪ್ರಭಾರ ಶಿಕ್ಷಣಾಧಿಕಾರಿ ಕೆ.ಟಿ.ಗಣೇಶ್‍ಕುಮಾರ್ ವಂದಿಸಿದರು. ವಿದ್ಯಾರ್ಥಿಗಳು, ಶಿಕ್ಷಕರು ಸೇರಿದಂತೆ ಹಲವರು ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದರು.