ನವದೆಹಲಿ: ಅಮೆರಿಕದ ಕಾರು ತಯಾರಿಕಾ ಕಂಪನಿ ಫೋರ್ಡ್ ಭಾರತದಲ್ಲಿ ಎಲೆಕ್ಟ್ರೀಕ್ ಕಾರುಗಳನ್ನು ತಯಾರಿಸುವುದಿಲ್ಲ ಎಂದು ತಿಳಿಸಿದೆ.
ಭಾರತದಲ್ಲಿ ಎಲೆಕ್ಟ್ರೀಕಲ್ ಕಾರುಗಳನ್ನು ತಯಾರಿಸಿ ಜಾಗತಿಕ ಮಾರುಕಟ್ಟೆಗೆ ಕಳುಹಿಸುವುದಿಲ್ಲ ಎಂದು ಫೋರ್ಡ್ ಇಂಡಿಯಾ ಚೆನ್ನೈನಲ್ಲಿರುವ ತನ್ನ ತಯಾರಿಕಾ ಘಟಕದ ಪ್ರಕಟಣೆಯಲ್ಲಿ ತಿಳಿಸಿರುವುದಾಗಿ ಎಕನಾಮಿಕ್ ಟ್ರೈಮ್ಸ್ ವರದಿ ಮಾಡಿದೆ.
ಕೇಂದ್ರ ಸರ್ಕಾರದ ಸಹಾಯಧನದಲ್ಲಿ ಸುಮಾರು 22 ಕಂಪನಿಗಳು ಭಾರತದಲ್ಲಿ ಇವಿ ವಾಹನಗಳನ್ನು ತಯಾರಿಸಲು ಸಮ್ಮತಿಸಿದ್ದವು. ಅದರಲ್ಲಿ ಇದೀಗ ಫೋರ್ಡ್ ಕಂಪನಿ ಹಿಂದೆ ಸರಿದಂತಾಗಿದೆ.
ದೀರ್ಘಾವಧಿಯಲ್ಲಿ ಬಂಡವಾಳ ಹೂಡಿಕೆಗೆ ಇದು ಸೂಕ್ತವಾಗುವುದಿಲ್ಲ ಎಂದು ಕಂಪನಿ ತಿಳಿಸಿದೆ. ಈ ಮೂಲಕ ಚೆನ್ನೈ ಹಾಗೂ ಗುಜರಾತ್‌ನ ಸನಂದಾದಲ್ಲಿನ ಘಟಕಗಳನ್ನು ಉದ್ದೇಶಿತ ಘಟಕಗಳನ್ನು ನಿಲ್ಲಿಸಲಾಗುವುದು ಎಂದು ಕಂಪನಿಯ ವಕ್ತಾರರು ತಿಳಿಸಿದ್ದಾರೆ.
ಎಲೆಕ್ಟ್ರೀಕಲ್ ಕಾರುಗಳ ತಯಾರಿಕೆಗೆ ನಮಗೆ ಭಾರತ ಸರ್ಕಾರ ಉತ್ತಮ ಸಹಕಾರ ನೀಡಿತ್ತು. ಆದರೆ, ಅನಿವಾರ್ಯ ಕಾರಣಗಳಿಂದ ನಾವು ಜಾಗತಿಕ ಮಾರುಕಟ್ಟೆಗಾಗಿ ಇಲ್ಲಿ ಎಲೆಕ್ಟ್ರೀಕಲ್ ಕಾರುಗಳನ್ನು ತಯಾರಿಸುವುದರಿಂದ ಹಿಂದೆ ಸರಿದಿದ್ದೇವೆ ಎಂದು ತಿಳಿಸಿದ್ದಾರೆ.