ಕಾಸರಗೋಡು: 'ರೊಟರಿ ಕಾನನೂರು - ಗಿಫ್ಟ್ ಆಫ್ ಲೈಫ್' ಯೋಜನೆಯನ್ವಯ 18 ವರ್ಷದೊಳಗಿನ 50 ಮಕ್ಕಳಿಗೆ ಉಚಿತ ಹೃದಯ ಶಸ್ತ್ರಚಿಕಿತ್ಸೆ ನಡೆಸುವ ಕಾರ್ಯ ನಡೆಯಲಿದೆ. ಹೃದಯಾರೋಗ್ಯ ಚಿಕಿತ್ಸೆಯಲ್ಲಿ ಖ್ಯಾತಿ ಗಳಿಸಿರುವ ಆಸ್ಟರ್ ಮಿಮ್ಸ್ ಆಸ್ಪತ್ರೆ ಸಹಕಾರದೊಂದಿಗೆ ಶಸ್ತ್ರ ಚಿಕಿತ್ಸೆ ನಡೆಯಲಿದೆ ಎಂದು ಡಾ.ಕೆ.ಕೆ ರಾಮಚಂದ್ರನ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜನನ ಕಾಲದಲ್ಲಿ ಕಂಡುಬರುವ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ, ಆರ್ಥಿಕವಾಗಿ ದುರ್ಬಲರಾದ ಕುಟುಂಬದ ಮಕ್ಕಳಿಗೆ ಶಸ್ತ್ರಚಿಕಿತ್ಸೆ ಉಚಿತವಾಗಿ ನೀಡಲಾಗುವುದು. ಹೃದಯಸಂಬಂಧಿ ಕಾಯಿಲೆಯಿಂದ ಬಳಲುವ ಮಕ್ಕಳನ್ನು ಶಸ್ತ್ರ ಚಿಕಿತ್ಸೆಗೆ ಆಯ್ಕೆಗೊಳಿಸುವ ನಿಟ್ಟಿನಲ್ಲಿ ಮೇ 28ರಂದು ಬೆಳಗ್ಗೆ 10ರಿಂದ ಸಂಜೆ 4ರ ವರೆಗೆ ವಿಶೇಷ ಶಿಬಿರ ಕಾಸರಗೋಡು ನಗರಸಭಾಂಗಣದಲ್ಲಿ ನಡೆಯಲಿದೆ. ರೋಟರಿ ಇಂಟರ್‍ನ್ಯಾಷನಲ್ ವತಿಯಿಂದ ಉತ್ತಮ ಆರೋಗ್ಯಕ್ಕಾಗಿ ನಡೆಸುವ ಜಾಗತಿಕ ಗ್ರಾಂಟ್ ಯೋಜನೆಯನ್ವಯ ಶಿಬಿರ ನಡೆಸಲಾಗುತ್ತಿದೆ.
ಆಸ್ಟರ್ ಮಿಮ್ಸ್ ಆಸ್ಪತ್ರೆ ಸಹಕಾರದೊಂದಿಗೆ ಅತ್ಯಾಧುನಿಕ ಸೌಲಭ್ಯ ಹೊಂದಿದ ವೈದ್ಯಕೀಯ ವಿದ್ಯಾಲಯದಲ್ಲಿ ತಜ್ಞ ವೈದ್ಯರು ಶಸ್ತ್ರಚಿಕಿತ್ಸೆಗೆ ನೇತೃತ್ವ ವಹಿಸಲಿದ್ದಾರೆ. ಈ ಯೋಜನೆ ಮೂಲಕ ಈಗಾಗಲೇ 13 ಮಂದಿ ಮಕ್ಕಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆಗೀ ಬಗ್ಗೆ ಹೆಚ್ಚಿನ ಮಾಹಿತಿಗಾಗಿ ರೋಟರಿ ಕಾನನೂರು(9048293734-9447102199)ಕಚೇರಿ ಸಂಪರ್ಕಿಸುವಂತೆ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ರೋಟರಿ ಕಾನನೂರು ಪದಾಧಿಕಾರಿಗಳಾದ ಪ್ರಸಾದ್ ಮಾಂಬಳ್ಳಿ, ಸುನಿಲ್ ಕಣಾರನ್, ಐ.ಎಂ.ಎ ಕಾಸರಗೋಡು ಜಿಲ್ಲಾ ಅಧ್ಯಕ್ಷ ಡಾ.ನಾರಾಯಣ ನಾಯ್ಕ್, ಕಾಸರಗೋಡು ಜಿಲ್ಲಾ ಐಎಂಎ ಗೋಲ್ಡನ್ ಜುಬಿಲಿ ಕನ್ವಿನರ್ ಡಾ.ಜನಾರ್ದನ ನಾಯ್ಕ್, ಪೀಪಲ್ಸ್ ಫಾರಂ ಅಧ್ಯಕ್ಷ ಪೆÇ್ರ.ವಿ.ಗೋಪಿನಾಥನ್ ಉಪಸ್ಥಿತರಿದ್ದರು.