HEALTH TIPS

'ಒಂದು ದೇಶ, ಒಂದೇ ಭಾಷೆ: ಹಿಂದಿಯನ್ನು ರಾಷ್ಟ್ರ ಭಾಷೆಯನ್ನಾಗಿ ಒಪ್ಪಬಹುದು- ಸಂಜಯ್ ರಾವತ್

                 ಮುಂಬೈ: 'ಒಂದು ದೇಶ ಒಂದು ಭಾಷೆ' ಪರ ಬೆಂಬಲ ವ್ಯಕ್ತಪಡಿಸಿರುವ ಶಿವಸೇನಾ ಮುಖಂಡ ಸಂಜಯ್ ರಾವತ್, ಹಿಂದಿಯನ್ನು ದೇಶಾದ್ಯಂತ ಮಾತನಾಡಲಿದ್ದು, ರಾಷ್ಟ್ರಭಾಷೆಯನ್ನಾಗಿ ಸ್ವೀಕರಿಸಬಹುದು ಎಂದು ಶನಿವಾರ ಹೇಳಿದ್ದಾರೆ. ಅಲ್ಲದೇ, ಎಲ್ಲಾ ರಾಜ್ಯಗಳಲ್ಲಿ ಒಂದು ಭಾಷೆಯ ಸವಾಲನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಸ್ವೀಕರಿಸಬೇಕೆಂದು ಕರೆ ನೀಡಿದ್ದಾರೆ.

              ಇಂಗ್ಲೀಷ್ ಗೆ ಪರ್ಯಾಯವಾಗಿ ಹಿಂದಿಯನ್ನು ರಾಷ್ಟ್ರೀಯ ಭಾಷೆಯನ್ನಾಗಿ ಸ್ವೀಕರಿಸಬೇಕು ಎಂದು ಅಮಿತ್ ಶಾ ಹೇಳಿಕೆ ನೀಡಿದ ಒಂದು ತಿಂಗಳ ನಂತರ ಸಂಜಯ್ ರಾವತ್ ಇದೀಗ ಈ ರೀತಿಯ ಹೇಳಿಕೆ ನೀಡಿದ್ದಾರೆ. 

              ಅಮಿತ್ ಶಾ ಅವರ ಹಿಂದಿ ರಾಷ್ಟ್ರ ಭಾಷೆ ಹೇಳಿಕೆ ಪ್ರಾದೇಶಿಕ ಭಾಷೆಗಳ ಅಸ್ವಿತ್ವಕ್ಕೆ ಧಕ್ಕೆ ತರುವ ಪ್ರಯತ್ನವೆಂದು ದಕ್ಷಿಣ ರಾಜ್ಯದ ಹಲವು ರಾಜಕೀಯ ಮುಖಂಡರು ಖಂಡಿಸಿದ್ದರು. ಇತ್ತೀಚಿಗೆ ನಟ ಅಜಯ್ ದೇವಗನ್ ಹಾಗೂ ಕಿಚ್ಚ ಸುದೀಪ್ ನಡುವೆ ಹಿಂದಿ ರಾಷ್ಟ್ರ ಭಾಷೆ ವಿಚಾರವಾಗಿ ಟ್ವೀಟ್ ಸಮರವೇ ನಡೆದಿತ್ತು. ಇದೀಗ ಸಂಜಯ್ ರಾವತ್ ಹಿಂದಿ ಪರ ಹೇಳಿಕೆ ನೀಡಿದ್ದು, ಮತ್ತೆ ಈ ವಿಚಾರ ಮುನ್ನೆಲೆಗೆ ಬರುತ್ತಿದೆ.

             ಹಿಂದಿ ಮಾತನಾಡುವವರು ಕೊಯಂಬತ್ತೂರಿನಲ್ಲಿ ಪಾನಿ ಪೂರಿ ಮಾರುತ್ತಿದ್ದಾರೆ ಎಂಬ ತಮಿಳುನಾಡು ಶಿಕ್ಷಣ ಸಚಿವ ಪೊನ್ಮುಡಿ ಹೇಳಿಕೆ ಕುರಿತು ಸಂಜಯ್ ರಾವತ್ ಹಿಂದಿ ಪರ ಹೇಳಿಕೆ ನೀಡಿದ್ದಾರೆ. ಈ ವರ್ಷಾಂತ್ಯಕ್ಕೆ ಮುಂಬೈಯನಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆ ನಡೆಯಲಿದ್ದು, ಹಿಂದಿ ಭಾಷಿಕರ ಹೆಚ್ಚಾಗಿದ್ದಾರೆ. ಅವರನ್ನು ಸೆಳೆಯಲು ಸಂಜಯ್ ರಾವತ್ ಹಿಂದಿ ಪರ ಹೇಳಿಕೆ ನೀಡಿದ್ದಾರೆ ಎನ್ನಲಾಗುತ್ತಿದೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries