ದೇಶಾದ್ಯಂತ ಕಲ್ಲಿದ್ದಲು ಅಭಾವ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಕಲ್ಲಿದ್ದಲು ಸಾಗಾಣಿಕೆ ಯನ್ನು ಕ್ಷಿಪ್ರಗೊಳಿಸುವ ಮೂಲಕ ಸುಲಲಿತ ಸಾಗಾಣಿಕೆಗೆ ಭಾರತೀಯ ರೈಲ್ವೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ದೇಶಾದ್ಯಂತ ಕಲ್ಲಿದ್ದಲು ಅಭಾವ ಪರಿಸ್ಥಿತಿ ತಲೆದೋರಿರುವ ಹಿನ್ನೆಲೆಯಲ್ಲಿ ಕಲ್ಲಿದ್ದಲು ಸಾಗಾಣಿಕೆ ಯನ್ನು ಕ್ಷಿಪ್ರಗೊಳಿಸುವ ಮೂಲಕ ಸುಲಲಿತ ಸಾಗಾಣಿಕೆಗೆ ಭಾರತೀಯ ರೈಲ್ವೆ ಅಗತ್ಯ ಕ್ರಮ ಕೈಗೊಂಡಿದೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಯಾವುದೇ ರೈಲು ಮಾರ್ಗಗಳಲ್ಲಿ ಪ್ಯಾಸೆಂಜರ್ ರೈಲುಗಳ ಬದಲಾಗಿ ಕಲ್ಲಿದ್ದಲು ಸಾಗಾಣಿಕೆ ರ್ಯಾಕ್‍ಗಳನ್ನು ಒಳಗೊಂಡಿರುವ ಗೂಡ್ಸ್ ರೈಲುಗಳಿಗೆ ಆದ್ಯತೆ ನೀಡುವುದು ಹಾಗೂ ಈ ರ್ಯಾಕ್‍ಗಳ ಯಾಂತ್ರಿಕ ಸ್ಥಿತಿಯನ್ನು ಪರಿಶೀಲಿಸಲು ನಿರ್ದಿಷ್ಟಪಡಿಸಿದ ಅವಧಿಯನ್ನು ವಿಸ್ತರಿಸುವುದು ಇದರಲ್ಲಿ ಸೇರಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
"ಕಲ್ಲಿದ್ದಲು ಸಾಗಾಣಿಕೆ ರೈಲುಗಳಿಗೆ ನಾವು ಆದ್ಯತೆ ನೀಡುತ್ತಿದ್ದೇವೆ. ಹೀಗೆ ಪ್ಯಾಸೆಂಜರ್/ಮೇಲ್/ಎಕ್ಸ್ ಪ್ರೆಸ್ ರೈಲುಗಳಿಗಿಂತ ಕಲ್ಲಿದ್ದಲು ಸಾಗಾಣಿಕೆ ರ್ಯಾಕ್ ರೈಲುಗಳಿಗೆ ಆದ್ಯತೆ ನೀಡಲಾಗುತ್ತಿದೆ" ಎಂದು ಅಧಿಕಾರಿ ಸ್ಪಷ್ಟಪಡಿಸಿದ್ದಾರೆ.
ಕಲ್ಲಿದ್ದಲು ಸಾಗಾಣಿಕೆ ರ್ಯಾಕ್‍ಗಳ ಕಾರ್ಯಾಚರಣೆ ಅವಧಿಯನ್ನು 2500 ಕಿಲೋಮೀಟರ್ ಹೆಚ್ಚಿಸಲು ಕೂಡಾ ಕ್ರಮ ಕೈಗೊಳ್ಳಲಾಗಿದೆ. ನಮ್ಮ ರ್ಯಾಕ್‍ಗಳ ಬ್ರೇಕ್ ಪವರ್ ಸರ್ಟಿಫಿಕೆಟ್ ಅವಧಿಯನ್ನು ಹೆಚ್ಚಿಸಲಾಗಿದೆ. ಈ ರ್ಯಾಕ್‍ಗಳ ಒಯ್ಯುವ ಸಾಮರ್ಥ್ಯ ವಿಸ್ತರಿಸಿ, ಪ್ರತಿ 7500 ಕಿಲೋಮೀಟರ್ ಬದಲಾಗಿ 10 ಸಾವಿರ ಕಿಲೋಮೀಟರ್ ಸಂಚರಿಸಿದ ಬಳಿಕ ಗ್ಯಾರೇಜ್‍ಗೆ ಒಯ್ಯಲಾಗುತ್ತದೆ. ಸಹಜವಾಗಿಯೇ ಇದು ಕಲ್ಲಿದ್ದಲು ಲೋಡಿಂಗ್ ಮತ್ತು ಒಯ್ಯುವ ಪ್ರಮಾಣವನ್ನು ಹೆಚ್ಚಿಸಲಿದೆ ಎಂದು ಅಧಿಕಾರಿ ವಿವರಿಸಿದರು. ಅಂತೆಯೇ ಬಿಪಿಸಿ ಅವಧಿಯನ್ನು 30 ದಿನದಿಂದ 35 ದಿನಕ್ಕೆ ವಿಸ್ತರಿಸಲಾಗಿದೆ.
ಗೂಡ್ಸ್ ಪರಿಶೀಲನಾ ಯಾರ್ಡ್‍ಗಳಲ್ಲಿ ಕಿರಿಯ ಎಂಜಿನಿಯರ್/ ಮೇಲ್ವಿಚಾರಕರು ಅಥವಾ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು ಪರಿಶೀಲಿಸಿದ ಬಳಿಕ ಗೂಡ್ಸ್ ರೈಲುಗಳಿಗೆ ಬಿಪಿಸಿಯನ್ನು ನೀಡಲಾಗುತ್ತದೆ ಎಂದು ವಿವರಿಸಿದ್ದಾರೆ.