ಪರಿಸರ ಮಾಲಿನ್ಯ ಹಾಗೂ ಜಲಮಾಲಿನ್ಯ ಸಹಿತ ಎಲ್ಲ ಬಗೆಯ ಮಾಲಿನ್ಯಗಳಿಂದ ಭಾರತದಲ್ಲಿ ಜಗತ್ತಿನಲ್ಲೇ ಅತಿ ಹೆಚ್ಚು ಜನರು ಮೃತಪಟ್ಟಿದ್ದಾರೆ ಎಂಬ ಆಘಾತಕಾರಿ ಅಂಶವನ್ನು ಲ್ಯಾನ್ಸೆಟ್ ಅಧ್ಯಯನ ಬಹಿರಂಗ ಪಡಿಸಿದೆ. 2019ರಲ್ಲಿ ಮಾಲಿನ್ಯವು ಜಾಗತಿಕವಾಗಿ 90 ಲಕ್ಷ ಜನರ ಸಾವಿಗೆ ಕಾರಣವಾಗಿದೆ.
ಮಾರಕ ಅತಿ ಸಣ್ಣ ಕಣಗಳು
- ವಾಯುಮಾಲಿನ್ಯದಿಂದ ಉಂಟಾದ 9.8 ಲಕ್ಷ ಸಾವುಗಳಿಗೆ ಪಿಎಂ 2.5 ಕಣ ಹೊಣೆಯಾಗಿದೆ. ಗಾಳಿಯಲ್ಲಿರುವ 2.5 ಅಥವಾ ಅದಕ್ಕಿಂತಲೂ ಕಡಿಮೆ ಗಾತ್ರದ ಅತಿ ಸಣ್ಣ ಕಣಗಳು ಇಷ್ಟೊಂದು ಜನರ ಪ್ರಾಣಕ್ಕೆ ಕುತ್ತು ತಂದಿದೆ ಎಂದು ಸಂಶೋಧಕರು ಹೇಳಿದ್ದಾರೆ.
- ಮನೆಗಳಲ್ಲಿನ ವಾಯುಮಾಲಿನ್ಯಕ್ಕೆ ಬಲಿಯಾದವರ ಸಂಖ್ಯೆ 6.1 ಲಕ್ಷ.
- 66 ಲಕ್ಷಕ್ಕಿಂತ ಅಧಿಕ ಮನೆಯೊಳಗಿನ ಹಾಗೂ ಹೊರ ವಾತಾವರಣದ ವಾಯುಮಲಿನತೆಯಿಂದ ಸಂಭವಿಸಿದ ಜಾಗತಿಕ ಸಾವು 66 ಲಕ್ಷ 70 ಸಾವಿರ.
16.7 ಲಕ್ಷ: 2019ರಲ್ಲಿ ಎಲ್ಲ ರೀತಿಯ ಮಾಲಿನ್ಯದಿಂದ ಸಂಭವಿಸಿದ ಒಟ್ಟು ಅಕಾಲಿಕ 23.5 ಲಕ್ಷ ಸಾವಿನಲ್ಲಿ 16.7 ಲಕ್ಷಕ್ಕೆ ಕಾರಣವಾಗಿರುವುದು ವಾಯುಮಾಲಿನ್ಯ.
ಜಲಮಾಲಿನ್ಯದ ಪಾಲು: ಜಾಗತಿಕವಾಗಿ 10 ಲಕ್ಷ 36 ಸಾವಿರ ಜನರ ಅಕಾಲಿಕ ಮರ ಣಕ್ಕೆ ಜಲಮಾಲಿನ್ಯ ಕಾರಣ. ಸತುವಿ ನಿಂದ 9 ಲಕ್ಷ ಹಾಗೂ ವಿಷಕಾರಿ ಅನಿಲ ಸೂಸುವ ಉದ್ಯಮಗಳಲ್ಲಿನ ವೃತ್ತಿ ಕಾರಣದಿಂದ 8,70,000 ಜನರು ಮರಣಿಸಿದ್ದಾರೆ.
ಭಾರತದಲ್ಲಿ ನಿಯಂತ್ರಣ ಕ್ರಮ: ರಾಷ್ಟ್ರೀಯ ಶುದ್ಧ ವಾಯು ಕಾರ್ಯಕ್ರಮ ಮತ್ತು ರಾಷ್ಟ್ರ ರಾಜಧಾನಿ ವಲಯದ ವಾಯು ಗುಣಮಟ್ಟ ಆಯೋಗ ರಚನೆ. ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳಿಗೆ ಅಧಿಕಾರ.
ಬಡದೇಶಗಳಿಗೆ ಹೊರೆ: ಕಡಿಮೆ ಹಾಗೂ ಮಧ್ಯಮ ಆದಾಯದ ದೇಶಗಳಿಗೆ ವಾಯುಮಾಲಿನ್ಯದಿಂದ ಆರೋಗ್ಯ, ಸಾಮಾಜಿಕ ಹಾಗೂ ಆರ್ಥಿಕ ಸಮಸ್ಯೆ ಅಪಾರವಾಗಿರುತ್ತದೆ. ಪರಿಸ್ಥಿತಿ ಹೀಗಿದ್ದರೂ ಮಾಲಿನ್ಯ ತಡೆ ವಿಚಾರವನ್ನು ಅಂತಾರಾಷ್ಟ್ರೀಯ ಅಭಿವೃದ್ಧಿ ಅಜೆಂಡಾ ಬಹುತೇಕವಾಗಿ ನಿರ್ಲಕ್ಷಿಸಿದೆ ಎನ್ನುತ್ತಾರೆ ಅಧ್ಯಯನ ವರದಿಯ ಪ್ರಮುಖ ಲೇಖಕ ರಿಚರ್ಡ್ ಫುಲ್ಲರ್. ಅವರು ಸ್ವಿಜರ್ಲೆಂಡ್ನ ಜಿನೇವಾದಲ್ಲಿರುವ ಗ್ಲೋಬಲ್ ಅಲಯನ್ಸ್ ಆನ್ ಹೆಲ್ತ್ ಅಂಡ್ ಪೊಲ್ಯುಷನ್ಸ್ನ ಸಂಶೋಧಕರಾಗಿದ್ದಾರೆ.
ಗಂಗಾ ನದಿ ಬಯಲಿನಲ್ಲಿ ಭೀಕರ ಸ್ಥಿತಿ: ಉತ್ತರ ಭಾರತದಲ್ಲಿ ಗಂಗಾ ನದಿ ಬಯಲಿನಲ್ಲಿ ವಾಯುಮಾಲಿನ್ಯ ಭೀಕರ ಪ್ರಮಾಣದಲ್ಲಿದೆ. ಇಲ್ಲಿ ಇಂಧನ, ಜನಸಂಚಾರ, ಕೈಗಾರಿಕೆ, ಕೃಷಿ ಮತ್ತು ಇತರ ಚಟುವಟಿಕೆಗಳಿಂದಾಗಿ ಸ್ಥಳ ವಿನ್ಯಾಸ ಮತ್ತು ಹವಾಮಾನ ಸಾಂದ್ರಿತ ಮಾಲಿನ್ಯ ಇರುತ್ತದೆ. ಮನೆಗಳಲ್ಲಿ ಬೆರಣಿಯಂಥ ಜೈವಿಕವಸ್ತುಗಳನ್ನು ಒಲೆಗಳಲ್ಲಿ ಬಳಸುವುದು ಭಾರತದಲ್ಲಿ ವಾಯುಮಾಲಿನ್ಯ ಸಾವಿನ ಅತಿ ದೊಡ್ಡ ಮೂಲವಾಗಿದೆ. ಕಲ್ಲಿದ್ದಲು ಉರಿಯುವಿಕೆ ಹಾಗೂ ಬೆಳೆ ಸುಡುವುದು ನಂತರದ ಎರಡು ಪ್ರಮುಖ ಕಾರಣಗಳು.