ತ್ರಿಶೂರ್: ಮಳೆಯಿಂದಾಗಿ ಮುಂದೂಡಲ್ಪಟ್ಟ ತ್ರಿಶೂರ್ ಪುರಂ ಭಾಗವಾದ ಸಿಡಿಮದ್ದು ಪ್ರದರ್ಶನ ಇಂದು ನಡೆಸಲು ತೀರ್ಮಾನಿಸಲಾಗಿದೆ. ಅನನುಕೂಲ ಹವಾಮಾನದ ಹಿನ್ನೆಲೆಯಲ್ಲಿ ಪ್ರದರ್ಶನ ನಡೆಸಲುವುದನ್ನು ಮುಂದೂಡಲಾಗಿತ್ತು. ಮುಂದೂಡಲ್ಪಟ್ಟ ಸಿಡಿಮದ್ದು ಪ್ರದರ್ಶನ ಇಂದು ಸಂಜೆ 6:30ಕ್ಕೆ ನಡೆಯಲಿದೆ. ದೇವಸ್ವಂ ಜಂಟಿ ಸಭೆಯಲ್ಲಿ ಚರ್ಚಿಸಿ ನಿರ್ಧರಿಸಿದ ಬಳಿಕ ಜಿಲ್ಲಾಡಳಿತದ ಒಪ್ಪಿಗೆ ಪಡೆಯಲಾಯಿತು.
ಇದಕ್ಕೂ ಮುನ್ನ ಭಾನುವಾರ ಸಿಡಿಮದ್ದು ಪ್ರದರ್ಶನಕ್ಕೆ ನಿರ್ಧರಿಸಲಾಗಿತ್ತು. ಆದರೆ ರಜೆ ದಿನವಾದ್ದರಿಂದ ಸ್ವಚ್ಛತಾ ಕಾರ್ಯ ಸುಗಮವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಭಾನುವಾರ ನಡೆಯಬೇಕಿದ್ದ ಕಾರ್ಯಕ್ರಮ ಶನಿವಾರ ಸಂಜೆಯೇ ನಡೆಸಲು ನಿರ್ಧರಿಸಲಾಗಿದೆ. ಈ ನಡುವೆ ರಾಜ್ಯದಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
ಆಂಧ್ರ ಕರಾವಳಿಯಲ್ಲಿ ವಾಯುಭಾರ ಕುಸಿತದ ಹಿನ್ನೆಲೆಯಲ್ಲಿ ಮುಂದಿನ ಐದು ದಿನಗಳ ಕಾಲ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಕೇಂದ್ರ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ಆತಂಕದ ನಡುವೆಯೂ ಸಿಡಿಮದ್ದು ಪ್ರದರ್ಶನ ಇನ್ನೂ ಮುಂದೂಡಲು ಸಾಧ್ಯವಿಲ್ಲ ಎಂದು ದೇವಸ್ವಂ ಮಂಡಳಿಗಳು ಅಭಿಪ್ರಾಯಪಟ್ಟಿವೆ.
ಮೇ 11 ರಂದು ಮುಂಜಾನೆ 3 ಗಂಟೆಗೆ ತ್ರಿಶೂರ್ ಪೂರಂನಲ್ಲಿ ನಡೆಯಬೇಕಿದ್ದ ಈ ಪ್ರದರ್ಶನ ಭಾರೀ ಮಳೆಯಿಂದಾಗಿ ಮುಂದೂಡಲ್ಪಟ್ಟಿತ್ತು. ನಂತರ ಮೇ 12 ರಂದು ಸಂಜೆ ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಸಂಜೆ ತ್ರಿಶೂರ್ ಜಿಲ್ಲೆಯಲ್ಲಿ ಭಾರೀ ಮಳೆ ಸುರಿದಿದೆ. ನಂತರ ಭಾನುವಾರ ನಡೆಸಲು ನಿರ್ಧರಿಸಲಾಯಿತು. ಆದರೆ ಅಂತಿಮವಾಗಿ ಇಂದು ಪ್ರದರ್ಶನ ಏರ್ಪಡಿಸಲು ತೀರ್ಮಾನಿಸಲಾಗಿದೆ. ತ್ರಿಶೂರ್‍ನಲ್ಲಿ ನಿನ್ನೆಯೂ ಧಾರಾಕಾರ ಮಳೆಯಾಗಿದೆ.