ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ 2017ರಲ್ಲಿ ಅಶಾಂತಿಗೆ ಕಾರಣವಾದ ಭಯೋತ್ಪಾದನೆ ಪ್ರಕರಣದ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಕೋರ್ಟ್ ಗುರುವಾರ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲ್ಲಿಕ್ ಅಪರಾಧಿ ಎಂದು ತೀರ್ಪು ನೀಡಿದೆ.
ನವದೆಹಲಿ: ಕಾಶ್ಮೀರ ಕಣಿವೆಯಲ್ಲಿ 2017ರಲ್ಲಿ ಅಶಾಂತಿಗೆ ಕಾರಣವಾದ ಭಯೋತ್ಪಾದನೆ ಪ್ರಕರಣದ ಸಂಬಂಧ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್ಐಎ) ಕೋರ್ಟ್ ಗುರುವಾರ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲ್ಲಿಕ್ ಅಪರಾಧಿ ಎಂದು ತೀರ್ಪು ನೀಡಿದೆ.
ಕಠಿಣ ಕಾನೂನುಬಾಹಿರ ಚಟುವಟಿಕೆ ತಡೆ ಕಾನೂನು (ಯುಎಪಿಎ) ಅಡಿಯಲ್ಲಿ ಬರುವ ಆರೋಪಗಳ ಸಹಿತ ತನ್ನ ವಿರುದ್ಧದ ಎಲ್ಲ ಆರೋಪಗಳನ್ನು ಮಲ್ಲಿಕ್ ಮೇ 10ರಂದು ಒಪ್ಪಿಕೊಂಡಿದ್ದ. ಹಣಕಾಸು ವಿವರಗಳನ್ನು ಸಲ್ಲಿಸುವಂತೆ ಆತನಿಗೆ ಸೂಚಿಸಿದ್ದ ಕೋರ್ಟ್, ಆ ಬಗ್ಗೆ ಪರಿಶೀಲಿಸುವಂತೆ ಎನ್ಐಎಗೆ ನಿರ್ದೇಶಿಸಿತ್ತು. ತಪ್ಪೊಪ್ಪಿಗೆ ಬಗ್ಗೆ ಮರುಪರಿಶೀಲನೆ ನಡೆಸುತ್ತೀರಾ ಎಂದು ನ್ಯಾಯಾಧೀಶರು ಕೇಳಿದ್ದ ಪ್ರಶ್ನೆಗೆ ಪ್ರತಿಕ್ರಿಯಿಸಿದ್ದ ಮಲ್ಲಿಕ್, ಚೆನ್ನಾಗಿ ಯೋಚಿಸಿಯೇ ತಾನು ನಿರ್ಧಾರ ತೆಗೆದುಕೊಂಡಿರುವುದಾಗಿ ಹೇಳಿದ್ದ. ಅಮಿಕಸ್ ಕ್ಯೂರಿಯನ್ನು ಎರಡು ಬಾರಿ ಭೇಟಿಯಾಗಿ ಚಚಿರ್ಸಿದ್ದ. ಮಲ್ಲಿಕ್ ಸ್ವಪ್ರೇರಣೆಯಿಂದ ಹಾಗೂ ಎಲ್ಲ ಕಾನೂನಾತ್ಮಕ ಪ್ರಕ್ರಿಯೆಗಳ ನಂತರ ತನ್ನ ವಿರುದ್ಧದ ಆರೋಪಗಳನ್ನು ಒಪ್ಪಿಕೊಂಡಿದ್ದು ಅದನ್ನು ಅಂಗೀಕರಿಸಲಾಗಿದೆ ಎಂದು ಜಡ್ಜ್ ತೀಪಿರ್ನಲ್ಲಿ ಹೇಳಿದ್ದಾರೆ.
ಕಲ್ಲು ತೂರಾಟ ಪ್ರಕರಣಗಳು: 2016ರಲ್ಲಿ ಕಲ್ಲು ತೂರಾಟದ 89 ಪ್ರಕರಣಗಳು ದಾಖಲಾಗಿರುವ ಹಿಂಸಾತ್ಮಕ ಪ್ರತಿಭಟನೆಗಳನ್ನು ಜಮ್ಮು ಮತ್ತು ಕಾಶ್ಮೀರ ವಿಮೋಚನಾ ರಂಗದ (ಜೆಕೆಎಲ್ಎ) ಮುಖ್ಯಸ್ಥ ಮಲ್ಲಿಕ್ ಪ್ರಚೋದಿಸಿದ್ದ ಎಂದು ಎನ್ಐಎ ಆರೋಪಿಸಿತ್ತು. ಆತನ ಮನೆ ಮೇಲೆ ದಾಳಿ ಮಾಡಿದಾಗ ಹಿಜ್ಬುಲ್ ಮುಜಾಹಿದಿನ್ ಸಂಟನೆಯ ಲೆಟರ್ಹೆಡ್ ಸಿಕ್ಕಿದ್ದು ಅದನ್ನು ವಶಪಡಿಸಿಕೊಳ್ಳಲಾಗಿತ್ತು ಎಂದು ಎನ್ಐಎ ಹೇಳಿದೆ.