ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದಲ್ಲಿ 36 ವರ್ಷ ಜೈಲುವಾಸ ಅನುಭವಿಸಿರುವ ಎ.ಜಿ ಪೆರಾರಿವಾಲನ್ ಕ್ಷಮಾಪಣೆ ಬಗ್ಗೆ ರಾಷ್ಟ್ರಪತಿಗಳು ನಿರ್ಧಾರ ತೆಗೆದುಕೊಳ್ಳುವವರೆಗೆ ಕೋರ್ಟ್ ಕಾಯಬೇಕು ಎಂದು ಕೇಂದ್ರ ಸರ್ಕಾರ ನೀಡಿದ್ದ ಸಲಹೆಯನ್ನು ಸುಪ್ರೀಂಕೋರ್ಟ್ ಬುಧವಾರ ತಳ್ಳಿಹಾಕಿದೆ.

'ವಾದ ಮುಂದುವರಿಸಲು ನೀವು ಸಿದ್ಧರಿಲ್ಲದಿದ್ದರೆ ಪೆರಾರಿವಾಲನ್ ಬಿಡುಗಡೆಗೆ ನಾವು ಆದೇಶ ನೀಡುತ್ತೇವೆ. ಸಂವಿಧಾನ ಉಲ್ಲಂಘಿಸಿ ನಡೆಯುತ್ತಿರುವ ವಿದ್ಯಮಾನಗಳನ್ನು ಕಣ್ಣುಮುಚ್ಚಿಕೊಂಡು ನೋಡಲು ಸಾಧ್ಯವಿಲ್ಲ' ಎಂದು ಕೋರ್ಟ್ ಹೇಳಿತು.
ಕಡತವನ್ನು ರಾಜ್ಯಪಾಲರು ರಾಷ್ಟ್ರಪತಿಗಳಿಗೆ ಕಳುಹಿಸಿದ್ದಾರೆ ಎಂದು ಕೇಂದ್ರದ ಪರ ಹಾಜರಿದ್ದ ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ.ಎಂ. ನಟರಾಜ್ ತಿಳಿಸಿದರು. ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಬಿ.ಆರ್. ಗವಾಯಿ ಅವರಿದ್ದ ಪೀಠವು, ಪೆರಾರಿವಾಲನ್ ವಿಚಾರದಲ್ಲಿ ತಮಿಳುನಾಡು ರಾಜ್ಯ ಮಂತ್ರಿ ಪರಿಷತ್ ಕೈಗೊಂಡ ನಿರ್ಣಯಕ್ಕೆ ರಾಜ್ಯಪಾಲರು ಬದ್ಧರಾಗಿರುತ್ತಾರೆ. ಆದರೆ, ಈ ವಿಚಾರದಲ್ಲಿ ರಾಜ್ಯಪಾಲರಿಗಿಂತ ಕೋರ್ಟ್ ನಿರ್ಧಾರವೇ ಮುಖ್ಯವಾಗುತ್ತದೆ. ಈ ವಿಚಾರ ಪರಿಶೀಲಿಸುತ್ತೇವೆ' ಎಂದಿತು.
ರಾಜ್ಯ ಸಂಪುಟದ ನಿರ್ಣಯವನ್ನು ರಾಷ್ಟ್ರಪತಿಗಳಿಗೆ ರಾಜ್ಯಪಾಲರು ಕಳುಹಿಸಬಹುದೇ ಎಂಬ ಬಗ್ಗೆ ಕೋರ್ಟ್ ನಿರ್ಧರಿಸುತ್ತದೆ ಎಂದು ಪೀಠ ಹೇಳಿತು.