ಕುಂಬಳೆ: ಜಿಲ್ಲೆಯಲ್ಲಿ ಜಲ ಜೀವನ್ ಮಿಷನ್ ಯೋಜನೆ ಅನುಷ್ಠಾನಕ್ಕಾಗಿ ಭೂಸ್ವಾಧೀನ ಕುರಿತು ಜಿಲ್ಲಾಧಿಕಾರಿ ಭಂಡಾರಿ ಸ್ವಾಗತ್ ರಣವೀರಚಂದ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ವಲಿಯಪರಂಬ ಗ್ರಾಮದಲ್ಲಿ ಪಂಚಾಯಿತಿ ವ್ಯಾಪ್ತಿಯ ಸರ್ವೆ ನಂ.222ರಲ್ಲಿ 15 ಸೆಂಟ್ಸ್ ಜಮೀನು ಜಲಜೀವನ ಮಿಷನ್ ನೀರಿನ ಟ್ಯಾಂಕ್ ನಿರ್ಮಾಣಕ್ಕೆ ಭೂಮಿ ಹಸ್ತಾಂತರಿಸಲು ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ತಿಳಿಸಿದರು.
ಕುಂಬಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಉಜಾರ್-ಉಳುವಾರ್ ಗ್ರಾಮದ ಮೀಸಲು ಸಂಖ್ಯೆ 35ರಲ್ಲಿನ 2 ಎಕರೆ ಜಮೀನನ್ನು ಆ.27ರಂದು ಪಂಚಾಯಿತಿ ಅಧಿಕಾರಿಗಳೊಂದಿಗೆ ಮಾತನಾಡಿ ಸರ್ವೆ ಮಾಡಲು ಜಲ ಪ್ರಾಧಿಕಾರ ನಿರ್ಧರಿಸಿತ್ತು. ಆದರೆ ದೈವಸ್ಥಾನ ಸಮಿತಿ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಜಮೀನು ಸರ್ವೆ ಮಾಡಲಾಗಲಿಲ್ಲ. ಮಾ.16ರಂದು ಭೂಮಾಪನ ನಡೆಸಲು ಭೂಮಾಪಕರಿಗೆ ನಿರ್ದೇಶನ ನೀಡುವಂತೆ ಜಿಲ್ಲಾಧಿಕಾರಿಗಳು ಜಿಲ್ಲಾಧಿಕಾರಿ (ಎಲ್ ಆರ್ ) ಅವರಿಗೆ ಸೂಚಿಸಿದರು.
ಆದೂರು ಗ್ರಾಮದಲ್ಲಿ ಮೀಸಲು ಸಂಖ್ಯೆ 404ರ 20 ಸೆಂಟ್ಸ್ ಜಮೀನು ಪ್ರಸ್ತುತ ಕಾರಡ್ಕ ಗ್ರಾ.ಪಂ.ವ್ಯಾಪ್ತಿಗೆ ಒಳಪಟ್ಟಿದ್ದು, ಕೇರಳ ವಾಟರ್ ಅಥೋರಿಟಿ ಸ್ಥಳದಲ್ಲಿ ಪರಿಶೀಲನೆ ಸಾಧ್ಯವಾಗಿಲ್ಲ ಎಂದು ಜಲ ಪ್ರಾಧಿಕಾರದ ಕಾರ್ಯಪಾಲಕ ಅಭಿಯಂತರರು ಸಭೆಗೆ ತಿಳಿಸಿದರು.
ಜಲ್ ಜೀವನ್ ಪ್ರಾಜೆಕ್ಟ್ ಜಾರಿಗೊಳಿಸಲು ಅಗತ್ಯವಿರುವ ಖಾಸಗಿ ಜಮೀನಿನ ಮಾಹಿತಿ (ವಿಳಾಸ, ಫೆÇೀನ್ ಸಂಖ್ಯೆ) ಯನ್ನು ಡೆಪ್ಯುಟಿ ಡೈರೆಕ್ಟರ್ ಆಫ್ ಪಂಚಾಯತಿಗೆ ನೀಡಲು ಮತ್ತು ವಾಟರ್ ಅಥೋರಿಟಿ ಅಭಿಯಂತರರಿಗೆ ಜಿಲ್ಲಾಧಿಕಾರಿ ಆದೇಶ ನೀಡಿದರು. ಜಲಜೀವನ ಮಿಷನ್ ಯೋಜನೆ ಅನುಷ್ಠಾನಕ್ಕೆ ಸಂಬಂಧಿಸಿದ ಪ್ರಗತಿ ಪರಿಶೀಲನೆಗೆ ಪ್ರತಿ ವಾರ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಭೆ ಕರೆಯಲು ಈ ಸಂದರ್ಭ ತೀರ್ಮಾನಿಸಲಾಯಿತು.
ಸಭೆಗೆ ನಿಯಮಿತವಾಗಿ ಹಾಜರಾಗದ ಪಂಚಾಯಿತಿ ಕಾರ್ಯದರ್ಶಿಗಳಿಗೆ ಶೋಕಾಸ್ ನೋಟಿಸ್ ಜಾರಿ ಮಾಡುವಂತೆಯೂ ಜಿಲ್ಲಾಧಿಕಾರಿಗಳು ಪಂಚಾಯಿತಿ ಉಪನಿರ್ದೇಶಕರಿಗೆ ಸೂಚಿಸಿದರು.
ಕಾಸರಗೋಡು ಉಪ ಜಿಲ್ಲಾಧಿಕಾರಿ ಜಿಗಿ ಪೌಲ್, ಕಾಸರಗೋಡು ತಹಶೀಲ್ದಾರ್ ವಿಎ ಜೂಡಿ, ವೆಳ್ಳರಿಕುಂಡು ತಹಶೀಲ್ದಾರ್ ಪಿವಿ ಮುರಳಿ, ಹೊಸದುರ್ಗ ತಹಶೀಲ್ದಾರ್ ಎಂ ಮಣಿರಾಜ್, ಮಂಜೇಶ್ವರ ತಹಶೀಲ್ದಾರ್ ಪಿಜೆ ಆಂಟೊ, ಕೇರಳ ಜಲ ಪ್ರಾಧಿಕಾರದ ಕಾರ್ಯನಿರ್ವಾಹಕ ಇಂಜಿನಿಯರ್ ಕೆ ಸುದೀಪ್, ವಲಿಯಪರಂಬ, ಕುಂಬಳೆ, ಕಾರಡ್ಕ, ತೃಕ್ಕರಿಪುರ, ಪಡನ್ನ ಗ್ರಾ.ಪಂ. ಪಂಚಾಯತಿ ಆಡಳಿತಗಳ ಉಪ ನಿರ್ದೇಶಕ ಜಾಮ್ಸನ್ ಮ್ಯಾಥ್ಯು ಉಪಸ್ಥಿತರಿದ್ದರು.