ಬದಿಯಡ್ಕ : ಅರಿವು ಎಂಬುದು ಯಾವುದೇ ರೂಪದಲ್ಲಿರಬಹುದು. ಬೆಳಕು,ಗಾಳಿ, ಶಬ್ದ ಹೀಗೆ ಬೇರೆ ಬೇರೆ ರೀತಿಯಲ್ಲಿ ಅರಿವು ಅರ್ಥಾತ್ ಜ್ಞಾನ ನಮ್ಮೆಡೆಗೆ ಹರಿದು ಬರುತ್ತದೆ. ಅದನ್ನು ಸಕಾರತ್ಮಕವಾಗಿ ಸ್ವೀಕರಿಸಿಕೊಂಡು ಬದುಕಿನಲ್ಲಿ ಅಳವಡಿಸುವ ಕೆಲಸ ನಮ್ಮಿಂದಾಗಬೇಕು ಎಂದು ಒಡಿಯೂರು ಗುರುದೇವದತ್ತ ಸಂಸ್ಥಾನದ ಶ್ರೀಗುರುದೇವಾನಂದ ಸ್ವಾಮೀಜಿ ನುಡಿದರು.
ಅವರು ಕುದ್ರೆಪ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನ ಅಷ್ಟಬಂಧ ಬ್ರಹ್ಮಕಲಶೋತ್ಸವದ ಆರನೇಯ ದಿನ ನಡೆದ ಧಾರ್ಮಿಕ ಸಭೆಯ ಸಮಾರೋಪದಲ್ಲಿ ಅಶೀರ್ವಚನಗೈದು ಮಾತನಾಡಿದರು.
ನಮ್ಮ ಆಸ್ತಿಕರ ಸಹಕಾರದಲ್ಲಿ ಬ್ರಹ್ಮಕಲಶ ವೈಭÀವಯುತವಾಗಿ ನಡೆದಿರುವುದು ಶ್ಲಾಘನೀಯ. ಆದರೆ ಮುಂದಕ್ಕೆ ನಮ್ಮ ಧಾರ್ಮಿಕತೆಗೆ ಚ್ಯುತಿ ಬಾರದಂತೆ ಮುಂದುವರಿಸಿಕೊಂಡೋಗುವುದು ಪ್ರತಿಯೊಬ್ಬರ ಕರ್ತವ್ಯವಾಗಿರಲಿ ಎಂದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ, ಧಾರ್ಮಿಕ ಮುಂದಾಳು ಕೆ.ಎನ್.ವೆಂಕಟ್ರಮಣ ಹೊಳ್ಳ ಕಾಸರಗೋಡು ಸಭೆಯ ಅಧ್ಯಕ್ಷತೆ ವಹಿಸಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘ್ ಸೇವಾ ಪ್ರಮುಖ್ ನಾ.ಸೀತಾರಾಮ ಧಾರ್ಮಿಕ ಉಪನ್ಯಾಸಗೈದರು. ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ರಾಮಚಂದ್ರ ಪೆಜತ್ತಾಯ, ಧಾರ್ಮಿಕ ಮುಂದಾಳುಗಳಾದ ಗೋಪಾಲ ಶೆಟ್ಟಿ ಅರಿಬೈಲು, ಸತೀಶ್ ಶೆಟ್ಟಿ ಒಡ್ಡಂಬೆಟ್ಟು, ಸಾಹಿತಿ ರಾಧಾಕೃಷ್ಣ ಉಳಿಯತ್ತಡ್ಕ, ಶಡ್ರಂಪಾಡಿ ಕ್ಷೇತ್ರದ ಅಧ್ಯಕ್ಷ ಶಂಕರ ನಾರಾಯಣ ಭಟ್, ಕೂಡ್ಲು ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಶಂಕರ ಬೆಳ್ಳಿಗೆ, ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ, ಕ್ಯಾಂಪೆÇ್ಕದ ಎಜಿಎಂ ಶ್ಯಾಮ್ ಜೀ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು. ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸುಕುಮಾರ ಕುದ್ರೆಪ್ಪಾಡಿ ಸ್ವಾಗತಿಸಿ, ಬ್ರ.ಸ.ಉಪಾಧ್ಯಕ್ಷ ವಿಶಾಲಾಕ್ಷ ಪುತ್ರಕಳ ವಂದಿಸಿದರು.ಪ್ರ.ಕಾರ್ಯದರ್ಶಿ ಎಂ.ಆಶೋಕ್ ರೈ ಮಾಯಿಪ್ಪಾಡಿ ಗುತ್ತು ಕಾರ್ಯಕ್ರಮ ನಿರೂಪಿಸಿದರು.