ಕೊಟ್ಟಾಯಂ: ಆತ್ಮಹತ್ಯೆಗೆ ಯತ್ನಿಸಿದ ಯುವಕನನ್ನು ಪೋಲೀಸರು ರಕ್ಷಿಸಿದ್ದಾರೆ. ಕೊಟ್ಟಾಯಂನಲ್ಲಿ ಈ ಘಟನೆ ನಡೆದಿದೆ. ಪಾಲಾ ಕಿಜ್ಜತ್ತಡಿಯೂರಿನ 30 ವರ್ಷದ ವ್ಯಕ್ತಿಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ್ದು, ಅವರನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿನ್ನೆ ಸಂಜೆ ಈ ಘಟನೆ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದ ವೇಳೆ ಫೇಸ್ ಬುಕ್ ನಲ್ಲಿ ಯುವಕ ಆತ್ಮಹತ್ಯೆ ಲೈವ್ ನೀಡಿ ಯತ್ನಿಸಿದ್ದಾನೆ. ಈ ವಿಡಿಯೋಗೆ 'ಮೈ ಸೂಸೈಡ್ ಲೈವ್' ಎಂಬ ಶೀರ್ಷಿಕೆ ನೀಡಲಾಗಿತ್ತು. ಇದನ್ನು ಗಮನಿಸಿದ ವ್ಯಕ್ತಿಯೊಬ್ಬರು ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಅರ್ಧ ಗಂಟೆಯೊಳಗೆ ಎಸ್‍ಎಚ್‍ಒ ಕೆ.ಪಿ.ತೋಂಬ್ಸನ್ ನೇತೃತ್ವದ ಪೋಲೀಸ್ ತಂಡ ಮನೆಗೆ ಆಗಮಿಸಿತು.
ಮನೆಗೆ ಒಳಗಿನಿಂದ ಬೀಗ ಹಾಕಲಾಗಿತ್ತು. ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರೂ ಅವರು ಬರುವ ಮುನ್ನವೇ ಪೋಲೀಸರು ಯುವಕನ ಮನವೊಲಿಸಿ ಮನೆಯ ಬಾಗಿಲು ತೆರೆಯುವಂತೆ ಮಾಡಿದ್ದರು. ಬಳಿಕ ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸಲಾಯಿತು. ಗಾಯ ಗಂಭೀರವಾಗಿಲ್ಲ ಎಂದು ಪೋಲೀಸರು ತಿಳಿಸಿದ್ದಾರೆ.