ಬದಿಯಡ್ಕ: ನೀರ್ಚಾಲು ಸಮೀಪದ ಮಾನ್ಯ ವಿಷ್ಣುಮೂರ್ತಿ ನಗರದಲ್ಲಿ ಶ್ರೀ ಚೌಡೇಶ್ವರಿ ದೇವಸ್ಥಾನದ ಪ್ರತಿಷ್ಠಾ ಬ್ರಾಹ್ಮಕಲಶೋತ್ಸವದ ಪ್ರಯುಕ್ತ ಡಾ. ವಾಣಿಶ್ರೀ ಕಾಸರಗೋಡು ನೇತೃತ್ವದಲ್ಲಿ ಗಡಿನಾಡ ಕನ್ನಡ ಸಾಹಿತ್ಯ ಸಾಂಸ್ಕøತಿಕ ಸಂಘ ಕಾಸರಗೋಡು ಇದರ ವತಿಯಿಂದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಯಿತು.
ಶ್ಯಾಮಲಾ ಸಂಪತ್ತಿಲ, ಅರ್ಚನಾ ಸಂಪ್ಯಾಡಿ, ಪ್ರಣಮ್ಯ ದೇವಿ, ನಂದಕಿಶೋರ್ ಡಿ, ನಿರೀಕ್ಷ ಶೆಟ್ಟಿ ವಿಟ್ಲ, ಸನುಷ. ಎಂ, ಲಕ್ಷ್ಮಿನಂದ, ಸಾಂತ್ವನ, ಪ್ರಜ್ಞಾ ಪಿ ಎಸ್, ರಾಜೇಶ್, ಲಾಲಿತ್ಯ ಕುಮಾರ್ ಬೇಲೂರು, ಪ್ರಖ್ಯಾತ್ ಭಟ್, ಪುಣ್ಯ ಕೊಚ್ಚಿನ್ ಮೊದಲಾದ ಕಲಾವಿದರು ಗಾನ ನಾಟ್ಯ ವನ್ನು ಪ್ರದರ್ಶಿಸಿದರು. ಡಾ. ವಾಣಿಶ್ರೀ ಕಾಸರಗೋಡು ನಿರೂಪಿಸಿದರು. ಸಂಘದ ಕೋಶಾಧಿಕಾರಿ ಡಾ. ವೆಂಕಟ ಗಿರೀಶ್ ಉಪಸ್ಥಿತರಿದ್ದರು.