ನವದೆಹಲಿ: ದೇಶದ ಖಾಸಗಿ ವೈದ್ಯಕೀಯ ಕಾಲೇಜುಗಳು ಕ್ಯಾಪಿಟೇಷನ್ ಶುಲ್ಕ ವಿಧಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಇತರರಿಗೆ ಮಾಹಿತಿ ನೀಡಲು ತನ್ನದೇ ಅಧೀನದಲ್ಲಿ ವೆಬ್‌ಪೋರ್ಟಲ್ ಸ್ಥಾಪಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.
ನವದೆಹಲಿ: ದೇಶದ ಖಾಸಗಿ ವೈದ್ಯಕೀಯ ಕಾಲೇಜುಗಳು ಕ್ಯಾಪಿಟೇಷನ್ ಶುಲ್ಕ ವಿಧಿಸುವ ಬಗ್ಗೆ ವಿದ್ಯಾರ್ಥಿಗಳಿಗೆ ಮತ್ತು ಇತರರಿಗೆ ಮಾಹಿತಿ ನೀಡಲು ತನ್ನದೇ ಅಧೀನದಲ್ಲಿ ವೆಬ್‌ಪೋರ್ಟಲ್ ಸ್ಥಾಪಿಸಲು ಸುಪ್ರೀಂ ಕೋರ್ಟ್ ಆದೇಶಿಸಿದೆ.
ಕ್ಯಾಪಿಟೇಷನ್ ಶುಲ್ಕ ವಿಧಿಸುವುದನ್ನು ರಾಜ್ಯ ಸರ್ಕಾರಗಳು ನಿಷೇಧಿಸಿದ್ದರೂ ಮತ್ತು ಇದು ಅಪರಾಧವಾಗಿದ್ದರೂ ವೈದ್ಯಕೀಯ ಕಾಲೇಜು ಪ್ರವೇಶಕ್ಕಾಗಿ ಈ ಶುಲ್ಕವನ್ನು ವಿಧಿಸಲಾಗುತ್ತಿದೆ ಎಂಬುದು ಕಟು ವಾಸ್ತವ ಎಂದು ನ್ಯಾಯಮೂರ್ತಿಗಳಾದ ಎಲ್.ನಾಗೇಶ್ವರ ರಾವ್ ಮತ್ತು ಬಿ.ಆರ್.ಗವಾಯಿ ಅವರಿದ್ದ ನ್ಯಾಯಪೀಠವು ಅಭಿಪ್ರಾಯಪಟ್ಟಿದೆ.
ನ್ಯಾಷನಲ್ ಇನ್ಫಾರ್ಮೆಟಿಕ್ಸ್ ಸೆಂಟರ್ (ಎನ್‌ಐಸಿ) ಮೂಲಕ ವೆಬ್‌ಪೋರ್ಟಲ್ ಅನ್ನು ನಿರ್ವಹಣೆ ಮಾಡುವಂತೆಯೂ ನ್ಯಾಯಾಲಯ ಆದೇಶಿಸಿದೆ. ಕಾಲೇಜು ಪ್ರವೇಶದ ಸಮಯದಲ್ಲಿ ಅದರ ಬಗ್ಗೆ ವಿವರಗಳನ್ನು ಇಂಗ್ಲಿಷ್ ಮತ್ತು ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟಿಸುವಂತೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಸುಪ್ರೀಂ ಕೋರ್ಟ್ ನಿರ್ದೇಶಿಸಿದೆ.
ಕ್ಯಾಪಿಟೇಷನ್ ಶುಲ್ಕ ವಿಧಿಸುವುದನ್ನು ತಪ್ಪಿಸುವ ಸಲುವಾಗಿ ಖಾಸಗಿ ವೈದ್ಯಕೀಯ ಕಾಲೇಜು ಆಡಳಿತವು ನಗದು ರೂಪದಲ್ಲಿ ಶುಲ್ಕ ಪಡೆಯುವುದನ್ನು ನ್ಯಾಯಾಲಯವು ನಿಷೇಧಿಸಿದೆ.
ಕ್ಯಾಪಿಟೇಷನ್ ಶುಲ್ಕ ತಡೆಗೆ ಕರ್ನಾಟಕ, ತಮಿಳುನಾಡು, ಮಹಾರಾಷ್ಟ್ರ ಮತ್ತು ಆಂಧ್ರ ಪ್ರದೇಶ ರಾಜ್ಯಗಳು ಈಗಾಗಲೇ ಕಾನೂನನ್ನು ತಂದಿವೆ.