ಮುಳ್ಳೇರಿಯ: ಮುಳಿಯಾರು ಪಂಚಾಯತಿಯಲ್ಲಿ 2021-22ನೇ ಸಾಲಿನ ಯೋಜನೆಯಡಿ ನಿರ್ಮಿಸಲಾದ ಎಲ್‍ಎಸ್‍ಜಿಡಿ ಕಚೇರಿ ಕಟ್ಟಡವನ್ನು ಉದ್ಘಾಟಿಸಲಾಯಿತು. ಮುಳಿಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಿ.ವಿ.ಮಿನಿ ಉದ್ಘಾಟಿಸಿದರು. ಉಪಾಧ್ಯಕ್ಷ ಎ.ಜನಾರ್ದನ್ ಅಧ್ಯಕ್ಷತೆ ವಹಿಸಿದ್ದರು. ಅಭಿವೃದ್ಧಿ ಸ್ಥಾಯಿ ಸಮಿತಿ ಅಧ್ಯಕ್ಷೆ ರೈಸಾ ರಶೀದ್, ಕಲ್ಯಾಣ ಸ್ಥಾಯಿ ಸಮಿತಿ ಅಧ್ಯಕ್ಷ ಇ ಮೋಹನನ್, ಗ್ರಾ.ಪಂ. ಆರೋಗ್ಯ ವಿದ್ಯಾಭ್ಯಾಸ ಸ್ಥಾಯೀ ಸಮಿತಿ ಅ|ಧ್ಯಕ್ಷೆ ಅನೀಸ ಮನ್ಸೂರ್ ಮಲ್ಲ, ಸದಸ್ಯರಾದ ಅಬ್ಬಾಸ್ ಕೊಳಚ್ಚಪ್ಪು, ಎ.ಅನನ್ಯ, ಸತ್ಯವತಿ ಬಾವಿಕ್ಕೆರೆ, ರಮೇಶನ್ ಮುದಲಪ್ಪಾರ, ವಿ.ಶ್ಯಾಮಲ, ಸಿ.ನಾರಾಯಣಿ ಕುಟ್ಟಿ, ಎ.ಇ.ಆಶಾ ಪ್ರಕಾಶ್ ಮೊದಲಾದವರು ಉಪಸ್ಥಿತರಿದ್ದರು.