ಬದಿಯಡ್ಕ: ಕನ್ನಡ ಸಾಹಿತ್ಯ ಪರಿಷತ್ದತು ಕೇರಳ ಗಡಿನಾಡ ಘಟಕ ನಿರಂತರವಾಗಿ ನಡೆಸುತ್ತಿರುವ ಹಲವು ವೈವಿಧ್ಯಪೂರ್ಣ ಕಾರ್ಯಕ್ರಮಗಳಲ್ಲಿ ದತ್ತಿ ಉಪನ್ಯಾಸಗಳು ಮಹತ್ವದ್ದಾಗಿದೆ. ದಾನಿಗಳು ನೀಡಿದ ದತ್ತಿನಿಧಿಯ ಕೇವಲ ಬಡ್ಡಿಯಿಂದ ಮಾತ್ರ ನಡೆಸುವ ಕಾರ್ಯಕ್ರಮ ಇದಾಗಿದೆ. ತಗಲುವ ಖರ್ಚುವೆಚ್ಚಗಳನ್ನು ಗಮನಿಸದೆ ಸಾಹಿತ್ಯ ಪರಿಷತ್ತು ದತ್ತಿನಿಧಿ ನಿಕ್ಷೇಪಿಸಿರುವವರ ಆಶಯವನ್ನು ಗೌರವಿಸಿ ಕಾರ್ಯಕ್ರಮ ನಡೆಸುತ್ತಿರುವುದು ಶ್ಲಾಘನೀಯ ಎಂದು ನೀರ್ಚಾಲು ಮಹಾಜನ ವಿದ್ಯಾಸಂಸ್ಥೆಗಳ ವ್ಯವಸ್ಥಾಪಕ ಪ್ರಬಂಧಕ ಜಯದೇವ ಖಂಡಿಗೆ ಅಭಿಪ್ರಾಯ ವ್ಯಕ್ತಪಡಿಸಿದರು.
ಕುಂಟಿಕಾನ ಅನುದಾನಿತ ಹಿರಿಯ ಬುನಾದಿ ಶಾಲೆಯಲ್ಲಿ ಇತ್ತೀಚೆಗೆ ಆಯೋಜಿಸಲಾಗಿದ್ದ ಕಸಾಪ ದತ್ತಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತುಳು-ಕನ್ನಡ ಭಾಷೆ, ಸಾಹಿತ್ಯ, ಸಂಸ್ಕøತಿ ಬಾಂಧವ್ಯದ ಕುರಿತು ಹಿರಿಯ ಕವಿ, ವಿಮರ್ಶಕ, ಸಹಾಯಕ ಪ್ರಾಧ್ಯಾಪಕ ಡಾ.ರಾಧಾಕೃಷ್ಣ ಬೆಳ್ಳೂರು ಉಪನ್ಯಾಸ ನೀಡಿದರು. ಕಾಸರಗೋಡಿನ ಸಣ್ಣ ಕಥೆಗಳ ಕುರಿತು ಹಿರಿಯ ಕಥೆಗಾರ್ತಿ ಸಮಾಜ ಸೇವಕಿ ಸ್ನೇಹಲತಾ ದಿವಾಕರ ಉಪನ್ಯಾಸ ನೀಡಿದರು. ಪ್ರಾಚೀನ ಕನ್ನಡ ಸಾಹಿತ್ಯವನ್ನು ಶ್ರೀಮಂತಗೊಳಿಸುವಲ್ಲಿ ಜೈನರು ನಿರ್ವಹಿಸಿದ ಪಾತ್ರದ ಕುರಿತು ಯುವ ಸಂಶೋಧಕ ಡಾ.ಶ್ರೀಶ ಕುಮಾರ್ ಪಂಜಿತ್ತಡ್ಕ ಮಾತನಾಡಿದರು. ನಿವೃತ್ತ ಪ್ರಾಧ್ಯಾಪಕಿ ಡಾ.ಪ್ರಮೀಳಾ ಮಾಧವ ಶುಭಹಾರೈಸಿದರು. ಕುಂಟಿಕಾನ ಶಾಲಾ ವ್ಯವಸ್ಥಾಪಕ ಶಂಕರನಾರಾಯಣ ಶರ್ಮ ಕೆ., ಮುಖ್ಯ ಶಿಕ್ಷಕ ವೆಂಕಟರಾಜ ವಿ.ಶುಭಹಾರೈಸಿದರು.
ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್ ಅಧ್ಯಕ್ಷತೆ ವಹಿಸಿದ್ದರು. ಪ್ರೊ.ಪಿ.ಎನ್.ಮೂಡಿತ್ತಾಯ, ಡಾ.ಬೇ.ಸಿ.ಗೋಪಾಲಕೃಷ್ಣ ಭಟ್, ವಾಣಿ.ಪಿ.ಎಸ್. ಬೊಳುಂಬು, ಶರತ್ ಕುಮಾರ್, ಮುಕಾಂಬಿಕ ಕೆ, ದೀನಾ ಕೆ., ಶಿವಪ್ರಕಾಶ್ ಕೆ., ಎ.ರಾಧಾಕೃಷ್ಣನ್, ಅಬ್ದುಲ್ ಸಲಾಂಟಿ, ಖಾಲಿದ್ ಬಿ.ಎಂ., ವಿಜಯಲಕ್ಷ್ಮೀ, ಪ್ರೇಮಲತಾಎನ್., ಅಖಿಲ ಲಕ್ಷ್ಮೀ ಕೆ, ರಾಮ ನಾಯ್ಕ ಕೆ, ಗಣೇಶ ಭಟ್ ಕೆ, ಸುಶಾಂತ್ ಆರ್.ಕೆ, ಅಭಿಜ್ಞಾ ಕೆ, ಶನ್ಮಿತಾ ಪಿ.ಕೆ., ಪ್ರಶಾಂತ್ ಕುಮಾರ್, ಟಿ.ಜಯವಿಷ್ಣು ಉಪಸ್ಥಿತರಿದ್ದರು. ಶಾಲಾ ವಿದ್ಯಾರ್ಥಿಗಳು ನಾಡಗೀತೆ ಹಾಡಿದರು. ಗೌರವ ಕಾರ್ಯದರ್ಶಿ ಪ್ರದೀಪ್ ಕುಮಾರ್ ಶೆಟ್ಟಿ ಬೇಳ ಸ್ವಾಗತಿಸಿ, ಗಣೇಶ್ ಪ್ರಸಾದ್ ಪಾಣೂರು ವಂದಿಸಿದರು. ಶೇಖರ ಶೆಟ್ಟಿ ಕೆ. ಬಾಯಾರು ನಿರೂಪಿಸಿದರು.