ಕಾಸರಗೋಡು: ಚೆರ್ವತ್ತೂರು ಆಸುಪಾಸಿನ ಬಾವಿ ನೀರನ್ನು ಸಂಗ್ರಹಿಸಿ ಆಹಾರ ಸುರಕ್ಷಾ ವಿಭಾಗ ನಡೆಸಿದ ತಪಾಸಣೆಯಲ್ಲಿ ಶಿಗೆಲ್ಲಾ ಬ್ಯಾಕ್ಟೀರಿಯದ ಇರುವಿಕೆ ಖಚಿತಪಡಿಸಲಾಗಿದೆ. ಇಲಾಖೆ ಅಧಿಕಾರಿಗಳು ಸಂಗ್ರಹಿಸಿದ ಐದು ಮಾದರಿಗಳಲ್ಲಿ ಈ ಬ್ಯಾಕ್ಟೀರಿಯಾ ಕಂಡುಬಂದಿದೆ. ಮೇ 1ರಂದು ಚೆರ್ವತ್ತೂರಿನಲ್ಲಿ ವಿದ್ಯಾರ್ಥಿನಿ ಶವರ್ಮ ಸೇವಿಸಿದ ನಂತರ ಅಸೌಖ್ಯಗೊಂಡು ಸಾವಿಗೀಡಾದ ಹಿನ್ನೆಲೆಯಲ್ಲಿ ಈ ಪ್ರದೇಶದಲ್ಲಿ ವ್ಯಾಪಕವಾಗಿ ಬಾವಿನೀರಿನ ತಪಾಸಣೆ ನಡೆಸಲಾಗಿದೆ. ಆರೋಗ್ಯ ಇಲಾಖೆ ಈ ಪ್ರದೇಶದಿಂದ 30ರಷ್ಟು ಮಾದರಿ ಸಂಗ್ರಹಿಸಿ ತಪಾಸಣೆಗೆ ಕಳಿಹಿಸಿದ್ದು, ಇವುಗಳಲ್ಲಿ 23ರಲ್ಲೂ ಬ್ಯಾಕ್ಟೀರಿಯ ಪತ್ತೆಯಾಗಿದೆ.