ರಾಖಿಗಡಿ: ಹರಪ್ಪ ಕಾಲದ ಎರಡು ಮಾನವ ಅಸ್ಥಿಪಂಜರಗಳು ಹರಿಯಾಣದ ಹಿಸ್ಸಾರ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಅವುಗಳನ್ನು ಡಿಎನ್‌ಎ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ತಿಳಿಸಿದೆ.
ರಾಖಿಗಡಿ: ಹರಪ್ಪ ಕಾಲದ ಎರಡು ಮಾನವ ಅಸ್ಥಿಪಂಜರಗಳು ಹರಿಯಾಣದ ಹಿಸ್ಸಾರ್ ಜಿಲ್ಲೆಯಲ್ಲಿ ಪತ್ತೆಯಾಗಿದ್ದು, ಅವುಗಳನ್ನು ಡಿಎನ್‌ಎ ಪರೀಕ್ಷೆಗಾಗಿ ರವಾನಿಸಲಾಗಿದೆ ಎಂದು ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ತಿಳಿಸಿದೆ.
ಜಿಲ್ಲೆಯ ರಾಖಿಗಡಿ ಎಂಬಲ್ಲಿ ಇಬ್ಬರು ಮಹಿಳೆಯರ ಅಸ್ಥಿಪಂಜರಗಳು ಸಿಕ್ಕಿವೆ.
ಈ ಮೃತ ದೇಹಗಳು ಸುಮಾರು ಐದು ಸಾವಿರ ವರ್ಷಗಳ ಹಿಂದಿನವು ಎಂದು ಅಂದಾಜಿಸಲಾಗಿದೆ. ಮೃತದೇಹಗಳ ಪಕ್ಕದಲ್ಲೇ ಮಡಿಕೆ ಮತ್ತು ಕರಕುಶಲ ವಸ್ತುಗಳು ದೊರೆತಿವೆ. ದೆಹಲಿಯ ವಾಯವ್ಯ ದಿಕ್ಕಿನಲ್ಲಿ 150 ಕಿ.ಮೀ ದೂರದಲ್ಲಿರುವ ರಾಖಿಗಡಿಯಲ್ಲಿ ಫೆ.24 ರಂದು ಉತ್ಖನನ ಆರಂಭಿಸಲಾಗಿತ್ತು ಎಂದು ಅವರು ತಿಳಿಸಿದ್ದಾರೆ.