ಬದಿಯಡ್ಕ: ಬದಿಯಡ್ಕ ಶ್ರೀ ಭಾರತೀ ವಿದ್ಯಾಪೀಠದ 2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ವಿದ್ಯಾರ್ಥಿನಿಯಾಗಿ ಗುರುತಿಸಲ್ಪಟ್ಟ ಅನನ್ಯ ಪಿ. ಇವಳಿಗೆ ಸ್ವರ್ಣಾಂಕುರ ಪ್ರಶಸ್ತಿ ಪ್ರದಾನ ಮಾಡಲಾಯಿತು. ಬೇರ್ಕಡವು ದಿ.ಸೀತಾರಾಮ ಭಟ್ಟರ ಸ್ಮರಣಾರ್ಥ ಮೊಮ್ಮಗ ಶಿವರಂಜನ್ ಬೇರ್ಕಡವು ಕೊಡಮಾಡುವ ಪ್ರಶಸ್ತಿ ಪತ್ರ ಹಾಗೂ ಚಿನ್ನದ ಪದಕವನ್ನು ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ಪ್ರಾಂಶುಪಾಲ ಪುರುಷೋತ್ತಮ ಪುಣಿಂಚತ್ತಾಯ ಪುಂಡೂರು ನೀಡಿದರು. ಭಾರತೀಯ ವಾಯುಸೇನೆಯಿಂದ ನಿವೃತ್ತರಾದ ಪೆರ್ಮುಖ ಶ್ರೀಹರಿಪ್ರಸಾದ ಮತ್ತು ಅಧ್ಯಾಪಿಕೆ ರಶ್ಮಿ ಇವರ ಸುಪುತ್ರಿಯಾಗಿರುವ ಅನನ್ಯಾ ಪ್ರಸ್ತುತ ಮಂಗಳೂರಿನ ಎಕ್ಸ್ಪರ್ಟ್ ಕಾಲೇಜಿನಲ್ಲಿ ಉನ್ನತ ವ್ಯಾಸಂಗವನ್ನು ಮಾಡುತ್ತಿದ್ದಾಳೆ. ಇವಳು ಅ|ಂಗನವಾಡಿಯಿಂದ ಹತ್ತನೇ ತರಗತಿಯ ತನಕ ಶಾಲೆಯಲ್ಲಿ ಕಲಿತು ಕಲೋತ್ಸವ, ಆಟೋಟ ಸ್ಪರ್ಧೆ, ವಿಜ್ಞಾನಮೇಳ ಮೊದಲಾದ ಪಠ್ಯೇತರ ಚಟುವಟಿಕೆಗಳಲ್ಲಿಯೂ ಭಾಗವಹಿಸಿ ಬಹುಮಾನವನ್ನು ಗಿಟ್ಟಿಸಿರುಳುತ್ತಾಳೆ. ಸಂಗೀತ ಹಾಗೂ ಭರತನಾಟ್ಯವನ್ನೂ ಕರಗತಮಾಡಿಕೊಂಡ ಈಕೆ ಪ್ರಶಸ್ತಿಗೆ ಪಾತ್ರಳಾಗಿದ್ದಾಳೆ. ಶಾಲಾ ಸಂಚಾಲಕ ಜಯಪ್ರಕಾಶ ಪಜಿಲ, ನಿವೃತ್ತ ಚಿತ್ರಕಲಾ ಅಧ್ಯಾಪಕ ಪರಮೇಶ್ವರ ಹೆಬ್ಬಾರ, ಕಾರ್ಯದರ್ಶಿ ರಾಜಗೋಪಾಲ ಚುಳ್ಳಿಕ್ಕಾನ, ಮುಖ್ಯೋಪಾಧ್ಯಾಯ ಸತ್ಯನಾರಾಯಣ ಶರ್ಮ ಪಂಜಿತ್ತಡ್ಕ ಉಪಸ್ಥಿತರಿದ್ದರು.