ನವದೆಹಲಿ: ಭಾರತೀಯ ವಿದೇಶಾಂಗ ಸೇವೆಯಲ್ಲಿ ಬದಲಾವಣೆಯಾಗಿದೆ ಎಂದು ಯುರೋಪ್‌ನ ಅಧಿಕಾರಿಗಳು ಹೇಳಿದ್ದರು ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ವಿದೇಶಾಂಗ ಇಲಾಖೆ ಸಚಿವ ಜೈಶಂಕರ್ ತಿರುಗೇಟು ನೀಡಿದ್ದಾರೆ.
ನವದೆಹಲಿ: ಭಾರತೀಯ ವಿದೇಶಾಂಗ ಸೇವೆಯಲ್ಲಿ ಬದಲಾವಣೆಯಾಗಿದೆ ಎಂದು ಯುರೋಪ್‌ನ ಅಧಿಕಾರಿಗಳು ಹೇಳಿದ್ದರು ಎಂಬ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹೇಳಿಕೆಗೆ ವಿದೇಶಾಂಗ ಇಲಾಖೆ ಸಚಿವ ಜೈಶಂಕರ್ ತಿರುಗೇಟು ನೀಡಿದ್ದಾರೆ.
'ಹೌದು, ಭಾರತೀಯ ವಿದೇಶಾಂಗ ಸೇವೆ ಬದಲಾಗಿದೆ.
ಲಂಡನ್‌ನಲ್ಲಿ ನಡೆದ 'ಐಡಿಯಾಸ್ ಫಾರ್ ಇಂಡಿಯಾ ಕಾನ್‌ಕ್ಲೇವ್' ಕಾರ್ಯಕ್ರಮದ ಸಂವಾದದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು, 'ನಾನು ಯುರೋಪ್‌ನ ಅಧಿಕಾರಿಗಳೊಂದಿಗೆ ಮಾತನಾಡುತ್ತಿದ್ದೆ, ಭಾರತೀಯ ವಿದೇಶಾಂಗ ಸೇವೆಯು ಸಂಪೂರ್ಣ ಬದಲಾಗಿದೆ ಮತ್ತು ಅಧಿಕಾರಿಗಳು ಏನನ್ನೂ ಕೇಳಿಸಿಕೊಳ್ಳುವುದಿಲ್ಲ. ಅವರು ಉದ್ಧಟರಾಗಿದ್ದಾರೆ ಎಂದು ಅವರು ಹೇಳಿದರು. ಅವರಿಗೆ ನೀಡಲಾದ ಆದೇಶಗಳನ್ನು ಮಾತ್ರವೇ ನಮಗೆ ತಿಳಿಸುತ್ತಾರೆ ಎಂದರು. ಈ ರೀತಿ ಮಾಡುವುದು ಸರಿಯಲ್ಲ' ಎಂದಿದ್ದರು.