HEALTH TIPS

ಲಕ್ಷಾಂತರ ಹೆಣ್ಮಕ್ಕಳ ಪ್ರತಿನಿಧಿಯಾಗಿ ಕೇಳ್ತಿದ್ದೀನಿ. ಮೋದಿ ವಿರುದ್ಧ ದೇಶದ ಅತಿ ಕಿರಿಯ ಮೇಯರ್​ ಬೇಸರ!

            ತಿರುವನಂತಪುರಂ: ದೇಶದಲ್ಲಿ ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೇರಿವೆ. ಬೆಲೆ ಏರಿಕೆಗೆ ಯಾವಾಗ ಕಡಿವಾಣ ಬೀಳುತ್ತದೆ ಎಂದು ಜನರು ಆಸೆಗಣ್ಣಿನಿಂದ ಎದುರು ನೋಡುತ್ತಿರುವಾಗಲೇ ಇಂದು ಎಲ್​ಪಿಜಿ ಸಿಲಿಂಡರ್​ ಬೆಲೆಯಲ್ಲಿ ಮತ್ತೆ 50 ರೂಪಾಯಿ ಏರಿಕೆಯಾಗಿರುವುದು ಜನ ಸಾಮಾನ್ಯರ ಹೊಟ್ಟೆಯ ಮೇಲೆ ಬರೆ ಎಳೆದಂತಾಗಿದೆ.

           ಗೃಹ ಬಳಕೆಯ ಎಲ್​ಪಿಜಿ ಸಿಲಿಂಡರ್​ ಬೆಲೆ ಶನಿವಾರ 1000 ಗಡಿ ದಾಟಿದೆ. 50 ರೂ. ಬೆಲೆ ಏರಿಕೆಯೊಂದಿಗೆ 14.5 ಕೆಜಿ ಸಿಲಿಂಡರ್​ನ ಬೆಲೆ 1006 ರೂಪಾಯಿ ಆಗಿದೆ. ಇದರ ಬೆನ್ನಲ್ಲೇ ತಿರುವನಂತಪುರಂ ಮೇಯರ್​ ಆರ್ಯಾ ರಾಜೇಂದ್ರನ್ ಅವರು​ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನರ ಪರವಾಗಿ ಧ್ವನಿ ಏರಿಸಿದ್ದಾರೆ.

             ನಿನ್ನೆ ಬೆಳಗ್ಗೆ ನಾನು ಮನೆ ಬಿಡುವಾಗ ನನ್ನ ತಾಯಿ ಸಿಲಿಂಡರ್​ ಬೆಲೆ ಏರಿಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದು ಹೀಗೆ ಮುಂದುವರಿದರೆ ನನ್ನ ಮದುವೆಯ ಹೊತ್ತಿಗೆ ಸಿಲಿಂಡರ್​ ಬೆಲೆ ಸುಮಾರು 3,000 ರೂ. ಆಗುತ್ತದೆ. ಈ ರೀತಿ ಗ್ಯಾಸ್​ ಬೆಲೆ ಏರಿದರೆ, ಕುಟುಂಬಗಳ ಆರ್ಥಿಕ ಭದ್ರತೆಯನ್ನು ನಾಶ ಮಾಡಿದಂತಾಗುತ್ತದೆ ಎಂದು ಬೆಲೆ ಏರಿಕೆಯ ಬಗ್ಗೆ ಅಸಮಾಧಾನ ಹೊರ ಹಾಕಿದ್ದಾರೆ.

ಭವಿಷ್ಯವೇ ಪ್ರಶ್ನೆಯಾಗಿರುವ ಲಕ್ಷಾಂತರ ಹೆಣ್ಣುಮಕ್ಕಳ ಪ್ರತಿನಿಧಿಯಾಗಿ, ನಿರುದ್ಯೋಗ ಹೆಚ್ಚುತ್ತಿದ್ದು, ಬೆಲೆ ಏರಿಕೆಗೆ ಕಡಿವಾಣ ಹಾಕುವಂತೆ ಪ್ರಧಾನಿ ಮೋದಿ ಅವರಿಗೆ ಮೇಯರ್​ ಆರ್ಯಾ ರಾಜೇಂದ್ರನ್​ ಒತ್ತಾಯಿಸಿದ್ದಾರೆ.

                ಅಂದಹಾಗೆ ಆರ್ಯಾ ರಾಜೇಂದ್ರನ್​ ಅವರು 21ನೇ ವಯಸ್ಸಿನಲ್ಲೇ ತಿರುವನಂತಪುರದ ಆಲ್ ಸೇಂಟ್ಸ್ ಕಾಲೇಜಿನ ವಿದ್ಯಾರ್ಥಿಯಾಗಿರುವಾಗಲೇ ತಿರುವನಂತಪುರದ ಮೇಯರ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ದೇಶದ ಅತಿ ಕಿರಿಯ ಮೇಯರ್​ ಎಂಬ ಹೆಗ್ಗಳಿಕೆ ಪಾತ್ರರಾಗಿದ್ದಾರೆ. ಇದಲ್ಲದೆ, ಕೇರಳ ರಾಜ್ಯದ ಅತಿ ಕಿರಿಯ ಶಾಸಕ ಕೆ.ಎಂ. ಸಚಿನ್ ಜತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಇನ್ನು ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದಾರೆ. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries