ಮಂಜೇಶ್ವರ: ಕೆದುಂಬಾಡಿ ಕಂಚಿಲಕಟ್ಟೆ ಧರ್ಮರಕ್ಷ ಸಮಿತಿ ಯು ಆಶ್ರಯದಲ್ಲಿ ಶ್ರೀ ಗುಳಿಗ ಹಾಗೂ ಶ್ರೀ ಕೊರಗತನಿಯ ದೈವದ ಕೋಲೋತ್ಸವವು ವಿಜ್ಯಂಭಣೆಯಿಂದ ನಡೆಯಿತು.
ಬೋಳದಪದವು ಶ್ರೀ ಕೊರಗಜ್ಜ ದೈವದ ಕಟ್ಟೆಯಿಂದ ನೆತ್ತಿಲಪದವು ಜಂಕ್ಷನ್ ಮೂಲಕ ಕೊಂಡೆಯೂರು ಪರಮ ಪೂಜ್ಯ ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಯವರ ಉಪಸ್ಥಿತಿಯಲ್ಲಿ ಭಂಡಾರವು ಮೆರವಣಿಗೆ ಮೂಲಕ ಕಂಚಿಲಕಟ್ಟೆಗೆ ಆಗಮಿಸಿತು. ಫಲಹಾರದ ಬಳಿಕ ಶ್ರೀ ಗಳಿಂದ ಆಶೀರ್ವಚನ ವು ನಡೆಯಿತು.ಕೋಲದ ಮುಂಚಿತವಾಗಿ ದೀಪ ಪ್ರಜ್ವಲನವನ್ನು ಶ್ರೀ ಗಳು ನೆರವೇರಿಸಿದರು.
ಈ ಸಂದರ್ಭದಲ್ಲಿ ನೀರೋಳಿಕೆ ಶ್ರೀ ಮಾತಾ ಶ್ರಮದ ಎನ್.ನಾರಾಯಣ ಭಟ್,ಹಿಂದು ಜಾಗರಣ ವೇದಿಕೆ ಮುಖಂಡ ರಾದ ತಿಮ್ಮಪ್ಪ,ಜಯಂತ ಕಾಸರಗೋಡು,ಹರೀಶ್ ಕಾಸರಗೋಡು, ಜಯಪ್ರಕಾಶ್ ಬಂಬ್ರಾಣ , ಅಲ್ಲದೆ ಧರ್ಮರಕ್ಷಾ ಸಮಿತಿ ಯು ಮುಖಂಡರಾದ ಚಂದ್ರಹಾಸ ಪೂಜಾರಿ ಮುಡಿಮಾರ್ ಕೆ.ಶೀನ ಶೆಟ್ಟಿ ಕೆದುಂಬಾಡಿ,ಐತ್ತಪ್ಪ ಶೆಟ್ಟಿ ದೇವಂದ ಪಡುಪು ,ರವಿ ಮುಡಿಮಾರ್, ಉಮಾನಾಥ ಕಂಚಲಕಟ್ಟೆ,ರವಿ ಮಂಜಿನಾಡಿ,ಭಾಸ್ಕರ್ ಸಾಲ್ಯಾನ್, ಯತೀರಾಜ್ ಕೆದುಂಬಾಡಿ ಮುಂತಾದವರು ಉಪಸ್ಥಿತರಿದ್ದರು.ರವಿ ಮುಡಿಮಾರ್ ಸ್ವಾಗತಿಸಿ ಯತೀರಾಜ್ ವಂದಿಸಿದರು. ನಂತರ ಗುಳಿಗ ದೈವದ ಹಾಗು ಕೊರಗಜ್ಜ ದೈವದ ಕೋಲವು ನಡೆಯಿತು. ಆಮೇಲೆ ಅನ್ನಸಂತರ್ಪಣೆ ನಡೆಯಿತು.