ಬದಿಯಡ್ಕ: ಸಮಾಜ ಸೇವಕ, ಕೆನರಾ ಬ್ಯಾಂಕ್ ಅಸಿಸ್ಟಂಟ್ ಮ್ಯಾನೇಜರ್ ಆಗಿ ನಿವೃತ್ತರಾದ ಸುಂದರ ದೇವರಕೆರೆ ಇವರನ್ನು ಅವರ ಸ್ವಗ್ರಹದಲ್ಲಿ ಕಾಸರಗೋಡು ಜಿಲ್ಲಾ ಮೊಗೇರ ಸಂಘದ ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಗೌರವಾಧ್ಯಕ್ಷ ಕೃಷ್ಣದಾಸ್ ದರ್ಬೆತಡ್ಕ, ಕೋಶಾಧಿಕಾರಿ ಹರಿರಾಮ ಕುಳೂರು, ಉಪಾಧ್ಯಕ್ಷ ಗೋಪಾಲ ದರ್ಬೆತಡ್ಕ, ಬೆಳ್ಳಿಹಬ್ಬ ಸಂಚಾಲಕ ರವಿಕಾಂತ ಕೇಸರಿ ಕಡಾರ್, ಸಲಹೆಗಾರರಾದ ಪದ್ಮನಾಭ ಚೇನಕೋಡ್, ಮಾಜಿ ಅಧ್ಯಕ್ಷ ರವಿ ಕನಕಪಾಡಿ, ಸಂಘಟನಾ ಕಾರ್ಯದರ್ಶಿ ಸುಧಾಕರ ಬೆಳ್ಳಿಗೆ, ಪಂಚಾಯಿತಿ ಸದಸ್ಯ ಡಿ.ಶಂಕರ ದರ್ಬೆತಡ್ಕ, ಪೋಸ್ಟ್ ಮಾಸ್ತರ್ ಶಂಕರ್ ನೆಲ್ಲಿಕಟ್ಟೆ ಉಪಸ್ಥಿತರಿದ್ದರು.