ಕೊಚ್ಚಿ: ಪ್ರತಿಭಟನೆ ವೇಳೆ ಪಾಪ್ಯುಲರ್ ಫ್ರಂಟ್ ಹೈಕೋರ್ಟ್ ಅನ್ನು ಲೇವಡಿ ಮಾಡಿದೆ. ನ್ಯಾಯಾಧೀಶರ ಒಳ ಉಡುಪು ಕೇಸರಿ ಬಣ್ಣದಲ್ಲಿದೆ ಎಂದು ಪಾಪ್ಯುಲರ್ ಫ್ರಂಟ್ ಆರೋಪಿಸಿದೆ. ಪಾಪ್ಯುಲರ್ ಫ್ರಂಟ್ ನ ರಾಜ್ಯ ಸಮಿತಿ ಸದಸ್ಯ ಯಾಹ್ಯಾ ತಂಙಳ್ ಅವರು ನ್ಯಾಯಾಂಗ ನಿಂದನೆ ಹೇಳಿಕೆ ನೀಡಿರುವರು.
ಪೆÇೀಪ್ಯುಲರ್ ಫ್ರಂಟ್ ರ್ಯಾಲಿಯಲ್ಲಿ ಹಿಂದೂ ಕ್ರಿಶ್ಚಿಯನ್ ಧರ್ಮದ ವಿರುದ್ಧ ಘೋಷಣೆ ಕೂಗಿದ ಬಾಲಕನ ತಂದೆಯನ್ನು ಪೋಲೀಸರು ಇಂದು ಬಂಧಿಸಿದ್ದರು. ಇದರ ವಿರುದ್ಧ ಪಾಪ್ಯುಲರ್ ಫ್ರಂಟ್ ಪ್ರತಿಭಟನೆ ನಡೆಸಿತು. ಬಾಲಕನಿಗೆ ಸ್ಲೋಗನ್‍ಗಳನ್ನು ಯಾರೂ ಹೇಳಿಕೊಟ್ಟಿಲ್ಲ, ತಾವೇ ಕಲಿತಿದ್ದ ಎಂದು ಪೋಲೀಸರಿಗೆ ಬಾಲಕನ ತಂದೆ ತಿಳಿಸಿದ್ದಾರೆ.
ಕಳೆದ ಶನಿವಾರ ನಡೆದ ರ್ಯಾಲಿಯಲ್ಲಿ ಬಾಲಕ ಘೋಷಣೆಗಳನ್ನು ಕೂಗಿ ಗಾಬರಿ ಸೃಷ್ಟಿಸಿದ್ದ. ಸುದ್ದಿ ತಿಳಿಯುತ್ತಿದ್ದಂತೆ ಪಲ್ಲುರುತಿಯಲ್ಲಿ ನೆಲೆಸಿದ್ದ ಕುಟುಂಬ ತಲೆಮರೆಸಿಕೊಂಡಿತ್ತು. ಪೋಲೀಸರು ಒಂದು ವಾರದ ತನಿಖೆಯ ನಂತರ ಮಗು ಮತ್ತು ಅವನ ಕುಟುಂಬವನ್ನು ಪತ್ತೆ ಮಾಡಿದ್ದಾರೆ. ಅವರನ್ನು ತಲೆಮರೆಸಿಕೊಳ್ಳಲು ನೆರವಾದವರು ಯಾರು ಮತ್ತು ಕುಟುಂಬಕ್ಕೆ ಭಯೋತ್ಪಾದಕ ಸಂಘಟನೆಗಳೊಂದಿಗೆ ಸಂಪರ್ಕವಿದೆಯೇ ಎಂಬ ಬಗ್ಗೆ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.