ಕೊಚ್ಚಿ: ಆರ್‍ಎಸ್‍ಎಸ್ ಕಾರ್ಯಕರ್ತ ಸಂಜಿತ್ ಹತ್ಯೆ ಪ್ರಕರಣದಲ್ಲಿ ನ್ಯಾಯ ಸಿಗುವವರೆಗೂ ಹೋರಾಟ ಮುಂದುವರಿಸಲಾಗುವುದು ಹಾಗೂ ಮನವಿಯನ್ನು ಮತ್ತೆ ನೀಡಲಾಗುವುದು ಎಂದು ತಾಯಿ ಸುನೀತಾ ಹೇಳಿದ್ದಾರೆ. ಸಂಜಿತ್ ಹತ್ಯೆ ಪ್ರಕರಣವನ್ನು ಸಿಬಿಐಗೆ ವಹಿಸುವಂತೆ ಮಾಡಿದ ಮನವಿಯನ್ನು ಹೈಕೋರ್ಟ್ ತಿರಸ್ಕರಿಸಿದೆ ಎಂದು ಸಂಜಿತ್ ತಾಯಿ ಹೇಳಿದ್ದಾರೆ.
ರಾಜ್ಯ ಸರ್ಕಾರ ಮೊದಲಿನಿಂದಲೂ ಪ್ರಕರಣವನ್ನು ಸಿಬಿಐಗೆ ವಹಿಸಬಾರದು ಎಂದು ಹೇಳಿದೆ. ಸಂಜಿತ್ ಅವರ ಪತ್ನಿ ಅರ್ಷಿಕಾ ಅವರ ಮನವಿಯನ್ನು ಸುಪ್ರೀಂ ಕೋರ್ಟ್ ಕೂಡಾ ನಿನ್ನೆ ತಿರಸ್ಕರಿಸಿದೆ.
ಕೊಲೆಯ ಹಿಂದೆ ನಿಷೇಧಿತ ಸಂಘಟನೆಗಳ ಕೈವಾಡವಿದ್ದು, ತನಿಖೆಯನ್ನು ನೆರೆಯ ರಾಜ್ಯಗಳಿಗೂ ವಿಸ್ತರಿಸಬೇಕು ಹಾಗಾಗಿ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ಅರ್ಜಿದಾರರು ಒತ್ತಾಯಿಸಿದ್ದಾರೆ. ಆರೋಪಿಗಳಿಗೆ ಕೇರಳದ ಹೊರಗೆ ರಕ್ಷಣೆ ನೀಡಲಾಗಿದೆ. ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ ಪೋಲೀಸರ ವೈಫಲ್ಯ ಮತ್ತು ಸರ್ಕಾರ ತೋರಿದ ನಿರ್ಲಕ್ಷ್ಯವನ್ನು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಸಂಜಿತ್ ಹತ್ಯೆಯಲ್ಲಿ ಭಾಗಿಯಾದವರನ್ನು ಮತ್ತು ಆತನ ಸಹಚರರನ್ನು ಕೂಡಲೇ ಬಂಧಿಸಿ ಶಿಕ್ಷಿಸಬೇಕೆಂದು ಮನವಿಯಲ್ಲಿ ಕೋರಲಾಗಿದೆ. ಸಂಜಿತ್‍ನನ್ನು ರಾಜಕೀಯ ವೈಷಮ್ಯದಿಂದ ಹತ್ಯೆ ಮಾಡಿರುವುದು ಕೂಡ ತನಿಖಾ ತಂಡದಿಂದ ತಿಳಿದುಬಂದಿದೆ.
ನವೆಂಬರ್ 15 ರಂದು ಪತ್ನಿಯೊಂದಿಗೆ ಬೈಕ್ ನಲ್ಲಿ ಸಂಚರಿಸುತ್ತಿದ್ದ ಸಂಜಿತ್ ನನ್ನು ಪಾಪ್ಯುಲರ್ ಫ್ರಂಟ್ ಕಾರ್ಯಕರ್ತರು ಹತ್ಯೆಗೈದಿದ್ದರು.