ಭಾರತೀಯ ರೈಲ್ವೆಯು ಪ್ರಯಾಣಿಕರ ಅನುಕೂಲತೆ ಮತ್ತು ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ರೈಲಿನಲ್ಲಿ ಕೋಚ್‌ಗಳನ್ನು ಅಳವಡಿಸಲು ವ್ಯವಸ್ಥೆ ಮಾಡಿದೆ.
ಜನಸಂದಣಿಯೂ ಕಾರಣ
ಯಾವುದೇ ರೈಲಿನಲ್ಲಿ ಮೇಲ್ವರ್ಗದ ಕೋಚ್‌ಗಳು ಮತ್ತು ಮಹಿಳಾ ಕೋಚ್‌ಗಳು ಇತ್ಯಾದಿಗಳನ್ನು ರೈಲಿನ ಮಧ್ಯದಲ್ಲಿ ಇರಿಸಲಾಗುತ್ತದೆ. ಆದರೆ ಜನಸಂದಣಿಯ ಸಾಮಾನ್ಯ ಬೋಗಿಗಳನ್ನು ರೈಲಿನ ಎರಡೂ ಬದಿಗಳಲ್ಲಿ ಇರಿಸಲಾಗುತ್ತದೆ. ಪ್ರಯಾಣಿಕರ ಅನುಕೂಲಕ್ಕಾಗಿ ಇದನ್ನು ಮಾಡಲಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ನಿಲ್ದಾಣದ ನಿರ್ಗಮನ ದ್ವಾರ ಅಲ್ಲೇ ಇರುವುದೇಕೆ?
ಸಾಮಾನ್ಯವಾಗಿ ರೈಲ್ವೆ ನಿಲ್ದಾಣದ ನಿರ್ಗಮನ ದ್ವಾರವನ್ನು ಮಧ್ಯದಲ್ಲಿ ಇರಿಸಲಾಗುತ್ತದೆ. ರೈಲು ನಿಲ್ದಾಣದಲ್ಲಿ ನಿಲ್ಲಿಸಿದ ನಂತ ಎಸಿ ಕೋಚ್‌ಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಸುಲಭವಾಗಿ ನಿಲ್ದಾಣವನ್ನು ಪ್ರವೇಶಿಸಬಹುದು ಅಥವಾ ನಿರ್ಗಮಿಸಬಹುದು.
ಸಾಮಾನ್ಯ ಬೋಗಿಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಲೊಕೊಮೊಟಿವ್ ಅಥವಾ ಗಾರ್ಡ್ ಕಂಪಾರ್ಟ್‌ಮೆಂಟ್‌ನ ಸಮೀಪದಲ್ಲಿರಬಹುದು. ಪ್ರಯಾಣಿಕರ ಗುಂಪಿಗೆ ಅನುಕೂಲ ಮಾಡಿಕೊಡಲು ಎಂದೇ ಈ ರೀತಿ ವಿನ್ಯಾಸ ಮಾಡಿರಲಾಗುತ್ತದೆ. ಇದು ನಿಲ್ದಾಣ ಮತ್ತು ರೈಲಿನ ಭದ್ರತೆಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಸಾಮಾನ್ಯ ಕೋಚ್‌ಗಳನ್ನು ಮಧ್ಯದಲ್ಲಿದ್ದರೆ ಏನಾಗುತ್ತಿತ್ತು?
ಸಾಮಾನ್ಯ ದರ್ಜೆಯ ಕೋಚ್ ಮತ್ತು ಸ್ಲೀಪರ್ ದರ್ಜೆಯ ಕೋಚ್‌ಗಳು ಹೆಚ್ಚು ಜನದಟ್ಟಣೆಯಿಂದ ಕೂಡಿರುತ್ತವೆ ಎಂದು ರೈಲ್ವೆ ಅಧಿಕಾರಿಗಳು ಹೇಳುತ್ತಾರೆ. ಒಂದುವೇಳೆ, ಸಾಮಾನ್ಯ ಕೋಚ್‌ಗಳನ್ನು ಮಧ್ಯದಲ್ಲಿ ಇರಿಸಲಾಗಿದೆ ಎಂದು ಭಾವಿಸೋಣ, ಸಾಮಾನ್ಯ ಕೋಚ್ ಅನ್ನು ಮಧ್ಯದಲ್ಲಿ ಇರಿಸುವುದರಿಂದ ರೈಲು ಹತ್ತಲು ಅಥವಾ ಇಳಿಯಲು ಪ್ರಯತ್ನಿಸುವಾಗ ಪ್ಲಾಟ್‌ಫಾರ್ಮ್‌ನಲ್ಲಿ ದಟ್ಟಣೆ ಉಂಟಾಗಬಹುದು. ಈ ದಟ್ಟಣೆ ಇತರ ಪ್ರಯಾಣಿಕರಿಗೂ ಅನಾನುಕೂಲತೆಯನ್ನು ಸೃಷ್ಟಿಸಬಹುದು. ಹೀಗಾಗಿ ಜನರಲ್ ಬೋಗಿಗಳನ್ನು ರೈಲಿನ ಮಧ್ಯಭಾಗದಲ್ಲಿ ಇರಿಸುವುದಿಲ್ಲ.
ಹಾಗೇನಾದರೂ ಜನರಲ್ ಬೋಗಿಗಳನ್ನು ರೈಲಿನ ಮಧ್ಯಭಾಗದಲ್ಲಿ ಇರಿಸಿದರೆ ಉಳಿದ ಜನರು ರೈಲಿನ ಎರಡೂ ದಿಕ್ಕುಗಳಲ್ಲಿ ಜನದಟ್ಟಣೆಯ ಕಾರಣದಿಂದ ನಡೆದುಕೊಂಡು ಹೋಗಲೂ ಸಾಧ್ಯವಾಗುವುದಿಲ್ಲ. ಆದ್ದರಿಂದ ಪ್ರಯಾಣಿಕರ ಅನುಕೂಲಕ್ಕಾಗಿ ರೈಲಿನ ಎರಡೂ ತುದಿಗಳಲ್ಲಿ ಸಾಮಾನ್ಯ ಬೋಗಿಗಳನ್ನು ಅಳವಡಿಸಲಾಗಿದೆ.