HEALTH TIPS

ಪಕ್ಷದ ಒಳಗಡೆ ಬದಲಾವಣೆಯ ಅಗತ್ಯವಿದೆ: ಸೋನಿಯಾ ಗಾಂಧಿ

           ಉದಯಪುರ: ಪಕ್ಷದಲ್ಲಿ ಆತ್ಮಾವಲೋಕನದ ಪ್ರಾಮುಖ್ಯತೆಯನ್ನು ಒತ್ತಿ ಹೇಳಿರುವ ಕಾಂಗ್ರೆಸ್ ಪಕ್ಷದ ಮಧ್ಯಂತರ ಅಧ್ಯಕ್ಷೆ ಸೋನಿಯಾ ಗಾಂಧಿ, ಪಕ್ಷದಲ್ಲಿ ಕೆಲವು ಸಾಂಸ್ಥಿಕ ಸುಧಾರಣೆಗಳ ಅಗತ್ಯವಿದೆ ಎಂದು ಹೇಳಿದ್ದಾರೆ.

             ರಾಜಸ್ಥಾನದ ಉದಯಪುರದಲ್ಲಿ ನಡೆಯುತ್ತಿರುವ ಪಕ್ಷದ 'ನವ ಸಂಕಲ್ಪ ಚಿಂತನಾ ಶಿಬಿರ'ದಲ್ಲಿ ಮಾತನಾಡಿದ ಸೋನಿಯಾ ಗಾಂಧಿ, ಬಿಜೆಪಿಯ 'ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ' ಘೋಷಣೆಯನ್ನು ಟೀಕಿಸಿದ್ದಾರೆ.

              ಈ ಘೋಷಣೆಯ ಅರ್ಥ ಅಲ್ಪಸಂಖ್ಯಾತರನ್ನು 'ಕ್ರೂರವಾಗಿ ನಡೆಸಿಕೊಳ್ಳುವುದು' ಎಂದು ವಾಗ್ದಾಳಿ ನಡೆಸಿದ್ದಾರೆ.

                'ಪ್ರಧಾನಿ ಮೋದಿ ಮತ್ತು ಅವರ ಸಹೋದ್ಯೋಗಿಗಳು 'ಗರಿಷ್ಠ ಆಡಳಿತ, ಕನಿಷ್ಠ ಸರ್ಕಾರ' ಎಂಬ ಅವರ ಘೋಷಣೆಯಿಂದ ನಿಜವಾಗಿಯೂ ಏನನ್ನು ಅರ್ಥೈಸುತ್ತಿದ್ದಾರೆ ಎಂಬುದು ನೋವಿನಿಂದ ಸ್ಪಷ್ಟವಾಗಿದೆ. ಇದರರ್ಥ ದೇಶವನ್ನು ಶಾಶ್ವತ ಧ್ರುವೀಕರಣದ ಸ್ಥಿತಿಯಲ್ಲಿ ಇರಿಸುವುದು, ಜನರನ್ನು ನಿರಂತರವಾಗಿ ಭಯ ಮತ್ತು ಅಭದ್ರತೆಯಲ್ಲಿ ಬದುಕುವಂತೆ ಮಾಡುವುದೇ ಆಗಿದೆ. ನಮ್ಮ ಸಮಾಜದ ಅವಿಭಾಜ್ಯ ಅಂಗವಾಗಿರುವ ಮತ್ತು ನಮ್ಮ ಗಣರಾಜ್ಯದ ಸಮಾನ ನಾಗರಿಕರಾಗಿರುವ ಅಲ್ಪಸಂಖ್ಯಾತರನ್ನು ಟಾರ್ಗೆಟ್ ಮಾಡುವುದು, ಬಲಿಪಶುಗಳನ್ನಾಗಿ ಮಾಡುವುದು ಹಾಗೂ ಆಗಾಗ್ಗೆ ಅವರ ವಿರುದ್ಧ ಕ್ರೂರವಾಗಿ ವರ್ತಿಸುವುದು ಬಿಜೆಪಿ ನಾಯಕರ ಮಾತಿನ ಅರ್ಥವಾಗಿದೆ'ಎಂದು ಅವರು ಹೇಳಿದ್ದಾರೆ.

           'ಬಿಜೆಪಿ, ಆರೆಸ್ಸೆಸ್ ಮತ್ತು ಅದರ ಅಂಗಸಂಸ್ಥೆಗಳ ನೀತಿಗಳ ಪರಿಣಾಮವಾಗಿ ದೇಶವು ಎದುರಿಸುತ್ತಿರುವ ಹಲವಾರು ಸವಾಲುಗಳ ಕುರಿತಂತೆ ಚರ್ಚಿಸಲು ಇದು ನಮಗೆ ಅವಕಾಶವನ್ನು ನೀಡುತ್ತದೆ. ಇದು ನಮ್ಮ ಮುಂದಿರುವ ಅನೇಕ ಕಾರ್ಯಕ್ರಮಗಳ ಬಗ್ಗೆ ಚರ್ಚಿಸಲು ಒಂದು ಸುಸಂದರ್ಭವಾಗಿದೆ. ರಾಷ್ಟ್ರೀಯ ವಿಷಯಗಳ ಬಗ್ಗೆ 'ಚಿಂತನೆ' ಮತ್ತು ನಮ್ಮ ಪಕ್ಷದ ಸಂಘಟನೆಯ ಬಗ್ಗೆ ಅರ್ಥಪೂರ್ಣ 'ಆತ್ಮಚಿಂತನೆ' ಎರಡೂ ಮಾಡಬಹುದು. ಪಕ್ಷದ ಸಾಂಸ್ಥಿಕ ಬದಲಾವಣೆಯೂ ಇಂದಿನ ಅಗತ್ಯವಾಗಿದೆ'ಎಂದು ಸೋನಿಯಾ ಗಾಂಧಿ ಹೇಳಿದ್ದಾರೆ.

           'ನಾವು ನಮ್ಮ ಕೆಲಸದ ವಿಧಾನವನ್ನು ಬದಲಾಯಿಸಬೇಕಾಗಿದೆ'ಎಂದು ಸೋನಿಯಾ ಒತ್ತಿ ಹೇಳಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries