ತಿರುವನಂತಪುರ: ರಾಜ್ಯದಲ್ಲಿ ನಾಳೆ ಈದುಲ್ ಫಿತುರ್ ಹಬ್ಬಾಚರಣೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ನಾಳೆ ಮಂಗಳವಾರ ರಜೆ ಘೋಷಿಸಲಾಗಿದೆ. ಸರ್ಕಾರಿ ಮತ್ತು ಶಿಕ್ಷಣ ಸಂಸ್ಥೆಗಳಿಗೆ ರಜೆ ಇರುತ್ತದೆ. ಬ್ಯಾಂಕ್‍ಗಳಿಗೂ ರಜೆ ಅನ್ವಯವಾಗಲಿದೆ ಎಂದು ಸರ್ಕಾರ ಹೇಳಿದೆ. ನೆಗೋಶಿಯೇಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್ ಅಡಿಯಲ್ಲಿ ರಜೆ ಘೋಷಿಸಲಾಗಿದೆ.
ಕ್ಯಾಲೆಂಡರ್ ಪ್ರಕಾರ ಮೊದಲು ಇಂದು ರಜೆ ಘೋಷಿಸಲಾಗಿತ್ತು. ಆದರೆ ಕೇರಳದಲ್ಲಿ ನಿನ್ನೆ ಚಂದ್ರದರ್ಶನವಾಗದ(ಶವ್ವಾಲ್ ಮಾಸ) ಕಾರಣ ಮಂಗಳವಾರವೇ ಆಚರಣೆ ನಡೆಯಲಿದೆ. ಆದರೆ ಇಂದಿನ ರಜೆಯನ್ನು ಬದಲಾಯಿಸದಿರಲು ಸರ್ಕಾರ ನಿರ್ಧರಿಸಿತ್ತು. ಇದರ ಬೆನ್ನಲ್ಲೇ ಎರಡು ದಿನಗಳ ಈದ್ ರಜೆ ನೀಡಿದಂತಾಗಿದೆ.