HEALTH TIPS

ಹಿಂದೂ ದೇವತೆಗಳ ಆಕ್ಷೇಪಾರ್ಹ ಕಲಾಕೃತಿ: ಗುಜರಾತ್ ವಿದ್ಯಾರ್ಥಿ ವಿರುದ್ಧ ಎಫ್‌ಐಆರ್

             ವಡೋದರ: ಹಿಂದೂ ದೇವರು ಮತ್ತು ದೇವತೆಗಳನ್ನು ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರಿಸಿದ ಆರೋಪದಡಿ ಗುಜರಾತ್‌ನ ಮಹಾರಾಜ ಸಯ್ಯಾಜಿರಾವ್ ವಿಶ್ವವಿದ್ಯಾಲಯದ ಲಲಿತ ಕಲೆ ವಿಭಾಗದ ವಿದ್ಯಾರ್ಥಿ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

            ಲಲಿತ ಕಲಾ ವಿಭಾಗದ ವಿದ್ಯಾರ್ಥಿಗಳು ರಚಿಸಿರುವ ಕಲಾಕೃತಿಯಲ್ಲಿ ಹಿಂದೂ ದೇವತೆಗಳನ್ನು ಆಕ್ಷೇಪಾರ್ಹ ರೀತಿಯಲ್ಲಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ಕೆಲ ಬಲಪಂಥೀಯ ಸಂಘಟನೆಗಳು ಮತ್ತು ಎಬಿವಿಪಿ ಸದಸ್ಯರು ಪ್ರತಿಭಟನೆ ನಡೆಸಿದ್ದರು.

             ಎಬಿವಿಪಿ ಸದಸ್ಯ ಜಯವೀರ್ ಸಿನ್ಹಾ ರೌಲ್ಜಿ ಅವರ ದೂರಿನ ಮೇರೆಗೆ ಮೊದಲ ವರ್ಷದ ಲಲಿತಾ ಕಲಾ ಪದವಿ ವಿದ್ಯಾರ್ಥಿ ಮೇಲೆ ಸಯ್ಯಾಜಿಗುಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿರುವುದಾಗಿ ಇನ್ಸ್‌ಪೆಕ್ಟರ್ ಆರ್‌.ಜಿ. ಜಡೇಜ ಹೇಳಿದ್ದಾರೆ.

            ವಿದ್ಯಾರ್ಥಿಯ ವಿರುದ್ಧ ಭಾರತೀಯ ದಂಡ ಸಂಹಿತೆಯ ವಿಧಿ 295 ಎ (ದುರುದ್ದೇಶಪೂರಿತವಾಗಿ ಧಾರ್ಮಿಕ ಭಾವನೆಗೆ ಧಕ್ಕೆ ಮತ್ತು ಧರ್ಮದ ಅವಮಾನ) ಮತ್ತು 298 (ಯಾವುದೇ ವ್ಯಕ್ತಿಯ ಧಾರ್ಮಿಕ ಭಾವನೆಗಳನ್ನು ಘಾಸಿಗೊಳಿಸುವ ಉದ್ದೇಶದಿಂದ ಅಶ್ಲೀಲ ಪದಗಳ ಬಳಕೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ.

           ಮೇ 5 ರಂದು ತಮ್ಮ ವಾಟ್ಸ್‌ಆಯಪ್‌ಗೆ ಲಲಿತಕಲಾ ವಿದ್ಯಾರ್ಥಿಗಳು ಸಿದ್ಧಪಡಿಸಿದ್ದಾರೆ ಎನ್ನಲಾದ ಕೆಲವು ಆಕ್ಷೇಪಾರ್ಹ ಕಲಾಕೃತಿಗಳ ಫೋಟೊಗಳು ಬಂದಿದ್ದವು ಎಂದು ರೌಲ್ಜಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ. ದಿನಪತ್ರಿಕೆಗಳಲ್ಲಿ ಪ್ರಕಟವಾದ ಅತ್ಯಾಚಾರ ವರದಿಗಳ ಕಟಿಂಗ್ಸ್‌ಗಳನ್ನು ಬಳಸಿ ಈ ಕಲಾಕೃತಿಗಳನ್ನು ಸಿದ್ಧಪಡಿಸಲಾಗಿತ್ತು. ಈ ಮಧ್ಯೆ, ಈ ಕಲಾಕೃತಿಗಳನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡಲಾಗಿದೆ ಎಂಬ ಮಾತುಗಳು ಕೇಳಿಬಂದ ಹಿನ್ನೆಲೆಯಲ್ಲಿ ಎಬಿವಿಪಿ ಪರಿಶೀಲನೆ ನಡೆಸಿದಾಗ ಕಲಾಕೃತಿಗಳು ಪ್ರದರ್ಶನ ಪ್ರದೇಶದ ಗೋಡೆಯ ಮೇಲೆ ಇರಲಿಲ್ಲ.

                ತನಿಖೆ ವೇಳೆ ವಿದ್ಯಾರ್ಥಿ ಆಕ್ಷೇಪಾರ್ಹ ಕಲಾಕೃತಿಗಳನ್ನು ರಚಿಸಿ ಬಳಿಕ ಪ್ರದರ್ಶನ ಸ್ಥಳದಿಂದ ತೆಗೆದುಹಾಕಿದ್ದಾಗಿ ಒಪ್ಪಿಕೊಂಡಿದ್ದಾನೆ. ಪ್ರಕರಣ ಕುರಿತಂತೆ ತನಿಖೆ ನಡೆಸಿ ವರದಿ ನೀಡಲು ಉಪಕುಲಪತಿ ಡಾ. ವಿಜಯ್ ಕುಮಾರ್ ಶ್ರೀವಾಸ್ತವ ಅವರು, 9 ಸದಸ್ಯರ ಸತ್ಯಶೋಧನಾ ಸಮಿತಿಯನ್ನು ರಚಿಸಿದ್ದಾರೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries