ಕಾಸರಗೋಡು: ರಾಮರಾಜ ಕ್ಷತ್ರಿಯ ಸೇವಾ ಸಂಘ ಉಪಸಂಘ ಬೇಕಲ ಇದರ ಆಶ್ರಯದಲ್ಲಿ ವರ್ಷಂಪ್ರತಿ ನಡೆದು ಬರುವ ಶ್ರೀ ಶಂಕರ ಜಯಂತಿಯನ್ನು ಮುದಿಯಕ್ಕಾಲು ಕಾಳಬೈರವ ದೇವಸ್ಥಾನ ಹಾಗು ವಸಂತ ಪೂಜೆಯನ್ನು ತ್ರಿಕ್ಕನ್ನಾಡು ಶ್ರೀ ತ್ರಯಂಬಕೇಶ್ವರ ದೇವಸ್ಥಾನದಲ್ಲಿ ನಡೆಸಲಾಯಿತು.
ಶ್ರೀ ಶಂಕರ ಜಯಂತಿಯಂದು ಮಕ್ಕಳಿಗೆ ಶ್ರೀ ಶಂಕರ ವಿರಚಿತ ಸ್ತೋತ್ರಗಳ ಕಂಠಪಾಠ ಸ್ಪರ್ಧೆ ಏರ್ಪಡಿಸಲಾಯಿತು. ಅಜಿತ್ ಕುಮಾರ್ ಮುದಿಯಕ್ಕಾಲು ಅವರು ಸ್ಪರ್ಧಿಗಳಿಗೆ ಬಹುಮಾನ ವಿತರಿಸಿದರು. ಸುಧಾಕರ ಬೇಕಲ ಅವರು ಅನ್ನಪ್ರಸಾದವನ್ನು ಸೇವಾ ರೂಪದಲ್ಲಿ ನೀಡಿದರು.