ಕೊಚ್ಚಿ: ಆಲುವಾ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣದಲ್ಲಿ ನಿಲ್ಲಿಸಿದ್ದ ಕೆಎಸ್‍ಆರ್‍ಟಿಸಿ ಬಸ್ ಕಳ್ಳತನವಾಗಿದೆ. ಭದ್ರತಾ ಸಿಬ್ಬಂದಿಗಳ ವೇಶದಲ್ಲಿ ಬಂದ ಅಪರಿಚಿತ ಬಸ್ ಚಲಾಯಿಸಿ ಕೊಂಡೊಯ್ದರು ಎಂದು ತಿಳಿದು ಬಂದಿದೆ.
ಕಳುವಾದ ಬಸ್ ಕೋಝಿಕ್ಕೋಡ್-ಆಲುವಾ ಮಾರ್ಗದಲ್ಲಿ ಸಂಚರಿಸುವ ಕೆಎಸ್‍ಆರ್‍ಟಿಸಿ ಫಾಸ್ಟ್ ಪ್ಯಾಸೆಂಜರ್ ಬಸ್ ಆಗಿದೆ. ಗುರುವಾರ ಬೆಳಗ್ಗೆ ಕಳ್ಳತನವಾಗಿರುವ ಬಗ್ಗೆ ವರದಿಯಾಗಿದೆ. ಘಟನೆ ಕುರಿತು ಪೋಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.