ಕೊಚ್ಚಿ: ಕೇರಳದ ಸಾರ್ವಜನಿಕ ಸಭೆಯೊಂದರಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಹಾಗೂ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೀಡಿರುವ ಹಲವು ಹೇಳಿಕೆಗಳು ಹಸಿ ಸುಳ್ಳು ಎಂಬ ಅ|ಭಿಪ್ರಾಯ ವ್ಯಾಪಕವಾಗಿದೆ. ಆಮ್ ಆದ್ಮಿ ಪಕ್ಷಕ್ಕೆ ದೆಹಲಿಯಲ್ಲಿ ಉಚಿತ ವಿದ್ಯುತ್, ವೈದ್ಯಕೀಯ ಚಿಕಿತ್ಸೆ, ನೀರು ಮತ್ತು ಶಿಕ್ಷಣವನ್ನು ನೀಡಲು ಸಾಧ್ಯವಾಯಿತು ಮತ್ತು ಕೇರಳದಲ್ಲೂ ಅದೇ ರೀತಿ ಮಾಡಲಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮತ್ತು ಜೋಕ್ ಗಳು ಹೆಚ್ಚುತ್ತಿದ್ದು, ಅರವಿಂದ್ ಕೇಜ್ರಿವಾಲ್ ಅವರ ವಿರುದ್ದ ಕೆಲವು ಟೀಕೆಗಳನ್ನು ಎತ್ತಿ ತೋರಿಸಿದೆ.
ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷದ ಸರ್ಕಾರ ಉಚಿತ ವಿದ್ಯುತ್ ನೀಡುತ್ತಿರುವುದರಿಂದ ಇನ್ವರ್ಟರ್ ಮತ್ತು ಜನರೇಟರ್ ಕಂಪನಿಗಳನ್ನು ಮುಚ್ಚಲಾಗಿದೆ ಎಂದು ಅರವಿಂದ್ ಕೇಜ್ರಿವಾಲ್ ಹೇಳಿದ್ದರು. ವಿದ್ಯುತ್ ಕಡಿತ ಇಲ್ಲ ಎಂಬುದು ಇನ್ನೊಂದು ವಾದವಾಗಿತ್ತು. ಆದರೆ ದೆಹಲಿಯಲ್ಲಿ ಜನರೇಟರ್ ಕಂಪನಿಗಳು ಮತ್ತು ಇನ್ವರ್ಟರ್ ಕಂಪನಿಗಳು ಎಂದು ಗೂಗಲ್ ಲ್ಲಿ ಹುಡುಕಿದರೆ ಸಾವಿರಾರು ಕಂಪನಿಗಳ ಲಿಂಕ್ ಸಿಗುತ್ತದೆ ಎಂಬುದು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿಬರುತ್ತಿದೆ.
ವೋಲ್ಟೇಜ್ ಏರಿಳಿತದಿಂದ ವಿದ್ಯುತ್ ಕಡಿತ ಮಾತ್ರವಲ್ಲದೆ ಕೆಲ ವಿದ್ಯುತ್ ಉಪಕರಣಗಳು ಹಾಳಾಗುತ್ತವೆ ಎನ್ನುತ್ತಾರೆ ಜನರು. ಕೇರಳಕ್ಕೂ ಮುನ್ನ ಕೇಜ್ರಿವಾಲ್ ಈ ತಿಂಗಳ ಆರಂಭದಲ್ಲಿ ಗುಜರಾತ್ ರ್ಯಾಲಿಯಲ್ಲಿ ಇದೇ ರೀತಿಯ ಭರವಸೆಗಳನ್ನು ನೀಡಿದ್ದರು. ಕೇರಳದಲ್ಲೂ ಉಚಿತ ವಿದ್ಯುತ್ ಬೇಡವೇ ಎಂದೂ ಕೇಜ್ರಿವಾಲ್ ಕೇಳಿದ್ದರು.
ಈ ಹಿಂದೆ ದೆಹಲಿಯಲ್ಲಿ ಕೇಳಿದವರಿಗೆ ಮಾತ್ರ ಉಚಿತ ವಿದ್ಯುತ್ ಲಭ್ಯ ಎಂದು ಕೇಜ್ರಿವಾಲ್ ಹೇಳಿದ್ದರು. ‘ಅಕ್ಟೋಬರ್ 1ರಿಂದ ವಿದ್ಯುತ್ ಸಬ್ಸಿಡಿ ಬೇಕಾದವರಿಗೆ ಮಾತ್ರ ನೀಡಲಾಗುವುದು. ಜನರಿಗೆ ವಿದ್ಯುತ್ ಸಬ್ಸಿಡಿ ಬೇಕೋ ಬೇಡವೋ ಎಂಬ ಆಯ್ಕೆಯನ್ನು ನೀಡುವುದಾಗಿ ಅರವಿಂದ್ ಕೇಜ್ರಿವಾಲ್ ಘೋಷಿಸಿದ್ದರು.
ಪಂಜಾಬ್ ಚುನಾವಣೆಯಲ್ಲಿ ಕೇಜ್ರಿವಾಲ್ ಅವರ ಗೆಲುವು ಇದೇ ರೀತಿಯ 'ಉಚಿತ' ಭರವಸೆಗಳನ್ನು ಆಧರಿಸಿದೆ. ಆಮ್ ಆದ್ಮಿ ಪಕ್ಷ ಅಧಿಕಾರಕ್ಕೆ ಬಂದು ಒಂದು ತಿಂಗಳು ಕಳೆದರೂ ಜನರಿಗೆ ಉಚಿತ ವಿದ್ಯುತ್ ನೀಡಲು ಸಾಧ್ಯವಾಗಿಲ್ಲ. ಗ್ರಾಹಕರಿಗೆ ಸಬ್ಸಿಡಿ ನೀಡುವಂತೆ ಪಂಜಾಬ್ ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಪಿಎಸ್‍ಇಆರ್‍ಸಿ) ಸರ್ಕಾರ ಇನ್ನೂ ಮನವಿ ಮಾಡಿಲ್ಲ ಎಂಬ ವರದಿಗಳಿವೆ.