ತಿರುವನಂತಪುರಂ: ಆತ್ಮಕಥೆಯಿಂದ ವಿವಾದಾತ್ಮಕ ಭಾಗಗಳನ್ನು ತೆಗೆಯುವುದಿಲ್ಲ ಎಂದು ಟೀಕಾರಾಂ ಮೀನಾ ಹೇಳಿದ್ದಾರೆ. ಪುಸ್ತಕದಲ್ಲಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಪಿ ಶಶಿ ವಿರುದ್ಧ ಆರೋಪಗಳಿವೆ. ವಿವಾದಾತ್ಮಕ ಉಲ್ಲೇಖಗಳನ್ನು ತೆಗೆದು ಪುಸ್ತಕ ಪ್ರಕಟಿಸಬೇಕು ಎಂಬ ಪಿ.ಶಶಿ ಅವರ ಬೇಡಿಕೆಯನ್ನು ಮೀನಾ ತಿರಸ್ಕರಿಸಿರುವರು. ಇ.ಕೆ. ಟಿಕಾರಾಂ ಮೀನಾ ಅವರ ಆತ್ಮಕಥೆಯು ನಾಯನಾರ್ ಮತ್ತು ಕೆ.ಕರುಣಾಕರನ್ ಅವರ ದುರದೃಷ್ಟದ ಕಥೆಯನ್ನು ಹೇಳುತ್ತದೆ.
ಅವರು ತ್ರಿಶೂರ್ ಕಲೆಕ್ಟರ್ ಆಗಿದ್ದಾಗ ನಕಲಿ ಮದ್ಯ ತಯಾರಕರ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದರು. ಬಳಿಕ ಟೀಕಾರಾಂ ಅವರನ್ನು ಎತ್ತಂಗಡಿ ಮಾಡಲಾಗಿತ್ತು. ಆತ್ಮಕಥೆಯ ಬರಹದಂತೆ, ಈ ಎತ್ತಂಗಡಿಯ ಹಿಂದೆ ಅಂದಿನ ಮುಖ್ಯಮಂತ್ರಿ ಇ.ಕೆ.ನಾಯನಾರ್ ಅವರ ರಾಜಕೀಯ ಕಾರ್ಯದರ್ಶಿಯಾಗಿದ್ದ ಪಿ.ಶಶಿ ಅವರ ಕೈವಾಡವಿತ್ತು ಎಂದಿದೆ. ನಂತರ ನಾಯನಾರ್ ಈ ವಿಷಯಗಳನ್ನು ನೇರವಾಗಿ ಹೇಳಿರುವುದು ಕೂಡ ಬಹಿರಂಗವಾಗಿತ್ತು.
ಮೀನಾ ಅವರ ಪುಸ್ತಕದಲ್ಲಿನ ಉಲ್ಲೇಖಗಳು ಮಾನಹಾನಿಕರವಾಗಿದ್ದು, ಆದ್ದರಿಂದ ತೆಗೆದುಹಾಕಬೇಕು ಎಂದು ಪಿ.ಶಶಿ ಟಿಕಾರಾಂ ಮೀನಾ ಅವರ ವಕೀಲರಿಗೆ ನೋಟಿಸ್ ಕಳುಹಿಸಿದ್ದರು. ಮೀನಾ ಅವರು ಆಧಾರ ರಹಿತ ಹಾಗೂ ಸುಳ್ಳು ಆರೋಪ ಮಾಡಿದ್ದಾರೆ ಎಂದು ವಕೀಲರು ನೋಟಿಸ್‍ನಲ್ಲಿ ತಿಳಿಸಿದ್ದಾರೆ. ಅವರು ಪುಸ್ತಕ ಪ್ರಕಟಣೆಯಿಂದ ಹಿಂದೆ ಸರಿಯಲು ಮತ್ತು ಮಾಧ್ಯಮದಲ್ಲಿ ಕ್ಷಮೆಯಾಚಿಸಲು ಬಯಸಿದ್ದರು. 50 ಲಕ್ಷ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಮಧ್ಯೆ, ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪಾಲ್ಗೊಳ್ಳುವುದಿಲ್ಲ ಎಂದು ಸಿಎಂ ಪತ್ರಿಕಾ ಕಾರ್ಯದರ್ಶಿ ಪ್ರಭಾ ವರ್ಮ ತಿಳಿಸಿದ್ದಾರೆ.