ಮಂಜೇಶ್ವರ: ಮಂಜೇಶ್ವರ ವ್ಯಾಪ್ತಿಯಲ್ಲಿ ಡೆಂಗ್ಯೂ ವ್ಯಾಪಿಸುತ್ತಿದ್ದು, ಮಗು ಸಹಿತ ಇಬ್ಬರು ಸಾವಿಗೀಡಾಗಿದ್ದಾರೆ.
ವರ್ಕಾಡಿ ಬೋಳದಪದವು ನಿವಾಸಿ ಬಾಬು ಸಫಲ್ಯ ಅವರ ಪುತ್ರ ನಿತೀಶ್ ಸಫಲ್ಯ(22) ಮತ್ತು ಜೋಡುಕಲ್ಲು ಮಡಂದೂರು ನಿವಾಸಿ ರಾಜೇಶ್ ಚೆಟ್ಟಿಯಾರ್ ಅವರ ಪುತ್ರಿ ಯಜ್ಞಶ್ರೀ (4) ಸಾವಿಗೀಡಾದರು.
ಮಂಗಳೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ನಿತೀಶ್ ಸಫಲ್ಯ ಅವರು ಮೇ 3 ರಂದು ರಾತ್ರಿ ಸಾವಿಗೀಡಾದರು. ಕಳೆದ ಎಂಟು ದಿನಗಳಿಂದ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಯಜ್ಞಶ್ರೀ ಮೇ 3 ರಂದು ಸಾವಿಗೀಡಾದರು.