ಕಾಸರಗೋಡು: ಕೃಷಿ ಸಂಸ್ಕøತಿಯನ್ನು ಜಾಗೃತಗೊಳಿಸುವ ಹಾಗೂ ಸುರಕ್ಷಿತ ಆಹಾರ ನೀಡುವ ನಿಟ್ಟಿನಲ್ಲಿ ಪಶ್ಚಿಮ ದಂಡೆಯಲ್ಲಿ ಕೃಷಿಗೆ ಜನಾಂದೋಲನ ಯೋಜನೆಯ ಪಿಲಿಕೋಡು ಪಂಚಾಯತ್ ಮಟ್ಟದ ಉದ್ಘಾಟನೆ ಪಡಿಞËರಕ್ಕರದಲ್ಲಿ ನಡೆಯಿತು. ನೀಲೇಶ್ವರಂ ಬ್ಲಾಕ್ ಪಂಚಾಯಿತಿ ಅಧ್ಯಕ್ಷ ಮಾಧವನ್ ಮಣಿಯರ ಬೀಜ ಬಿತ್ತುವ ಮೂಲಕ ಯೋಜನೆಗೆ ಚಾಲನೆ ನೀಡಿದರು. ಕಾರ್ಯಖ್ರಮದ ಅಂಗವಾಗಿ ಜನಪ್ರತಿನಿಧಿಗಳು, ರೈತರು ಹಾಗೂ ವಿದ್ಯಾರ್ಥಿಗಳನ್ನು ಒಳಗೊಂಡ ಘೋಷಣಾ ಮೆರವಣಿಗೆ ನಡೆಯಿತು. ಪಿಲಿಕೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ. ಪ. ಪ್ರಸನ್ನ ಕುಮಾರಿ ಅಧ್ಯಕ್ಷ ತೆ ವಹಿಸಿದ್ದರು.
ಬ್ಲಾಕ್ ಪಂಚಾಯಿತಿ ಸದಸ್ಯ ಎಂ.ವಿ ಸುಜಾತಾ ಪಿಲಿಕೋಡ್, ಗ್ರಾಮ ಪಂಚಾಯಿತಿ ಸದಸ್ಯರಾದ ನವೀನ್ ಕುಮಾರ್, ಸಿ.ವಿ ರಾಧಾಕೃಷ್ಣನ್, ಎನ್ ಪ್ರಸೀತಾ ಕುಮಾರಿ, ಪಿ ಪ್ರಮೀಳಾ, ಪಿ ಅಜಿತಾ, ವಿನಯಚಂದ್ರನ್ ಮಾಸ್ಟರ್ ಉಪಸ್ಥಿತರಿದ್ದರು.
ಪ್ರತಿ ಮನೆಗೂ ಕೃಷಿ ಸಂದೇಶ ಸಾರುವ ಸ್ಟಿಕ್ಕರ್‍ಗಳ ವಿತರಣೆಯನ್ನು ಅಭಿವೃದ್ಧಿ ಕಾರ್ಯಗಳ ಅಧ್ಯಕ್ಷೆ ಸಿ.ವಿ.ಚಂದ್ರಮತಿ ಉದ್ಘಾಟಿಸಿದರು. ಕೃಷಿ ಅಧಿಕಾರಿ ಪಿ.ವಿ.ಜಲೇಸನ್ ಯೋಜನೆ ಬಗ್ಗೆ ಮಾಃಇತಿ ನೀಡಿದರು. ಗದ್ದೆಯ ಉಳುಮೆ ಮಾಡಲು ಬಿಟ್ಟಿದ್ದ ಬಾಬು ಅವರನ್ನು ಉಪಾಧ್ಯಕ್ಷ ಎ.ಕೃಷ್ಣನ್ ಸನ್ಮಾನಿಸಿದರು. ಎಂ.ವಿ. ಕೋಮನ್ ನಂಬಿಯಾರ್ ನೆನನಪಿನ ಸಸಿ ನೆಟ್ಟರು. ಕಾರ್ಯಕ್ರಮದ ಅಂಗವಾಗಿ ವಾರ್ಡ್ ಸಂಚಾಲಕ ಮುರಳೀಧರನ್, ವಿಠನ್ ಬಾಲನ್, ಸಹಾಯಕ ಕೃಷಿ ಅಧಿಕಾರಿ ಎ.ವಿ ರಾಧಾಕೃಷ್ಣನ್ ಹಾಗೂ ಕೃಷಿ ಸಹಾಯಕ ಕೆ.ವಿ.ಸೋನಾ ಉಪಸ್ಥಿತರಿದ್ದರು.