HEALTH TIPS

ಬಾವಲಿಗಳ ಸಂತಾನೋತ್ಪತ್ತಿ ಅವಧಿ; ನಿಪ್ಪಾ ವೈರಸ್ ವಿರುದ್ಧ ಆರೋಗ್ಯ ಮೇಲ್ವಿಚಾರಣೆ ಮತ್ತು ಜಾಗೃತಿ ಬಲಪಡಿಸುವ ಸೂಚನೆ ನೀಡಿದ ಆರೋಗ್ಯ ಸಚಿವೆ

                  ತಿರುವನಂತಪುರ: ನಿಪ್ಪಾ ವೈರಸ್ ವಿರುದ್ಧ ಮುಂಜಾಗ್ರತಾ ಕ್ರಮಗಳನ್ನು ಬಲಪಡಿಸುವಂತೆ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೂಚಿಸಿದ್ದಾರೆ. ಈ ಹಿಂದೆಯೂ ಕೋಝಿಕ್ಕೋಡ್ ಮತ್ತು ಎರ್ನಾಕುಳಂ ಜಿಲ್ಲೆಗಳು ನಿಪಾ ವೈರಸ್‍ಗೆ ತುತ್ತಾಗಿದ್ದವು. ಪ್ರಸ್ತುತ ಇತರ ಜಿಲ್ಲೆಗಳಿಗೆ ಜಾಗರೂಕರಾಗಿರಲು ಸೂಚಿಸಲಾಗಿದೆ. ನಿಪಾ ಲಕ್ಷಣಗಳಿರುವ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಬಗ್ಗೆ ವಿಶೇಷ ಗಮನ ಹರಿಸಬೇಕು. ಬಾವಲಿಗಳ ಸಂತಾನೋತ್ಪತ್ತಿ ಕಾಲವಾಗಿರುವುದರಿಂದ ನಿರೀಕ್ಷಣೆ ಮತ್ತು ಜಾಗೃತಿಯನ್ನು ಬಲಪಡಿಸಲಾಗುವುದು. ಅರಣ್ಯ ಮತ್ತು ಪಶುಸಂಗೋಪನಾ ಇಲಾಖೆ ಸಹಯೋಗದಲ್ಲಿ ರಕ್ಷಣಾ ವ್ಯವಸ್ಥೆ ಮಾಡಲಾಗುವುದು ಎಂದರು.

                ನಿಪಾ ವೈರಸ್‍ನ ಮರಣ ಪ್ರಮಾಣ ತುಂಬಾ ಹೆಚ್ಚಾಗಿದೆ. ಅದಕ್ಕಾಗಿಯೇ ನಾವು ಹೆಚ್ಚು ಜಾಗರೂಕರಾಗಿರಬೇಕು. ಕೋಝಿಕ್ಕೋಡ್ ನಲ್ಲಿ ನಿಪಾ ವೈರಸ್ ರಾಜ್ಯದಲ್ಲಿ ಮೊದಲ ಬಾರಿಗೆ 2018 ರಲ್ಲಿ ವರದಿಯಾಗಿತ್ತು. ಆಗ 18 ಮಂದಿ ನಿಪ್ಪಾ ಪೀಡಿತರಾಗಿದ್ದರು. ಇಬ್ಬರನ್ನು ರಕ್ಷಿಸಲಾಗಿತ್ತು. 2019 ರಲ್ಲಿ, ಎರ್ನಾಕುಳಂನಲ್ಲಿ ನಿಪಾ ವೈರಸ್ ಸೋಂಕಿಗೆ ಒಳಗಾದ ವಿದ್ಯಾರ್ಥಿಯನ್ನು ರಕ್ಷಿಸಲಾಯಿತು. ಸೆಪ್ಟೆಂಬರ್ 2021 ರಲ್ಲಿ ಕೋಝಿಕ್ಕೋಡ್ ನಲ್ಲಿ ಮತ್ತೆ ನಿಪಾ ವೈರಸ್ ವರದಿಯಾಯಿತು.  ಅಂದು 12 ವರ್ಷದ ಬಾಲಕ ನಿಪಾದಿಂದ ಮೃತಪಟ್ಟಿದ್ದ. ವಿಷಯ ತಿಳಿದ ಸಚಿವೆ ವೀಣಾ ಜಾರ್ಜ್ ಅವರು ಕೋಝಿಕ್ಕೋಡ್‍ನಲ್ಲಿ ಮೊಕ್ಕಾಂ ಹೂಡಿ ಚಟುವಟಿಕೆಗಳನ್ನು ಸಮನ್ವಯದ ನೇತೃತ್ವ ವಹಿಸಿದ್ದರು. 

              ನಿಪಾ ಪೀಡಿತ ಪ್ರದೇಶದಿಂದ ಸಂಗ್ರಹಿಸಲಾದ ಬಾವಲಿಗಳ ಮಾದರಿಗಳಲ್ಲಿ  ವೈರಸ್ ವಿರುದ್ಧ  ಪ್ರತಿಕಾಯದ ಉಪಸ್ಥಿತಿಯು ದೃಢಪಟ್ಟಿದೆ. ಹೀಗಾಗಿ ಈ ಬಾರಿ ಕಟ್ಟೆಚ್ಚರ ವಹಿಸಲಾಗುವುದು. ಬಾವಲಿಗಳ ಸಂಪರ್ಕವನ್ನು ತಪ್ಪಿಸಬೇಕು. ನೆಲಕ್ಕೆ ಬಿದ್ದ ಮತ್ತು ಪಕ್ಷಿಗಳು ಕಚ್ಚಿದ ಹಣ್ಣುಗಳನ್ನು ತಿನ್ನಬಾರದು.  ಹಣ್ಣುಗಳನ್ನು ಚೆನ್ನಾಗಿ ತೊಳೆದು ಬಳಸಬೇಕು. ಬಾವಲಿಗಳಿರುವ ಪ್ರದೇಶದಲ್ಲಿರುವವರು ವಿಶೇಷವಾಗಿ ಜಾಗರೂಕರಾಗಿgಲು ಸೂಚಿಸಲಾಗಿದೆ. 

             ಐಸಿಎಂಆರ್, ಎನ್ ಸಿ ಡಿ ಸಿ, ಎಲ್ ಐ ವಿ  ಪುಣೆ, ಎಲ್ ಐ ವಿ ಆಲಪ್ಪುಳ, ರಾಜ್ಯ ವೈರಾಲಜಿ ಸಂಸ್ಥೆ, ಎಲ್ಲಾ ವೈದ್ಯಕೀಯ ಕಾಲೇಜುಗಳಿಂದ ಸಮುದಾಯ ಔಷಧ, ಸೂಕ್ಷ್ಮ ಜೀವವಿಜ್ಞಾನ ಮತ್ತು ಔಷಧ ತಜ್ಞರು, ಆರೋಗ್ಯ ತಜ್ಞರು, ಎಲ್ಲಾ ಜಿಲ್ಲೆಗಳಲ್ಲಿ ಜಿಲ್ಲಾ ವೈದ್ಯಾಧಿಕಾರಿಗಳು, ಜಿಲ್ಲಾ ಕಾರ್ಯಕ್ರಮ ನಿರ್ವಾಹಕರು, ಜಿಲ್ಲಾ ಕಣ್ಗಾವಲು ಅಧಿಕಾರಿಗಳು, ಇಲಾಖೆ ಅಧಿಕಾರಿಗಳು ಮತ್ತು ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳು ನಿಪ್ಪಾ ವಿರುದ್ದ ಕಾರ್ಯಾಚರಣೆ ನೇಋತ್ವ ವಹಿಸುವರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries