ತಿರುವನಂತಪುರ: ಅಂಗಡಿಯೊಂದರ ಲಿಫ್ಟ್‍ಗೆ ಸಿಲುಕಿ ಉದ್ಯೋಗಿಯೊಬ್ಬರು ಸಾವನ್ನಪ್ಪಿದ ಘಟನೆ ನಡೆದಿದೆ. ಮೃತರನ್ನು ಅಂಬಲಮುಕ್ಕಿನ ಸತೀಶ್ ಕುಮಾರ್ (59) ಎಂದು ಗುರುತಿಸಲಾಗಿದೆ. ಅಂಬಲಮುಕ್ಕಿನಲ್ಲಿರುವ ಸ್ಯಾನಿಟರಿ ಅಂಗಡಿಯಲ್ಲಿ ಮಂಗಳವಾರ ಬೆಳಗ್ಗೆ ಈ ದುರ್ಘಟನೆ ನಡೆದಿದೆ. ಸತೀಶ್ ಅಂಗಡಿಯಲ್ಲಿ ಉದ್ಯೋಗಿಯಾಗಿದ್ದ.
ಸತೀಶ್ ಅವರ ತಲೆ ಲಿಫ್ಟ್ ಬಾಗಿಲುಗಳ ನಡುವೆ ಸಿಲುಕಿಕೊಂಡಿತು. ಬಳಿಕ ಅಗ್ನಿಶಾಮಕ ದಳದ ಸಿಬ್ಬಂದಿ ಸತೀಶ್ ಅವರನ್ನು ರಕ್ಷಿಸಿದ್ದಾರೆ.
ಅವರು ಅಸುರಕ್ಷಿತ ಲಿಫ್ಟ್‍ನಲ್ಲಿ ಸಿಲುಕಿಕೊಂಡು ಅವಘಡಕ್ಕೆ ಕಾರಣವಾಯಿತು ಎನ್ನಲಾಗಿದೆ. ಅವಘಡ ಸಂಭವಿಸಿದ ಕಟ್ಟಡಕ್ಕೆ ಅಗ್ನಿಶಾಮಕ ದಳದ ಅನುಮತಿ ಇರಲಿಲ್ಲ ಎಂದು ತಿಳಿದುಬಂದಿದೆ. ಕೂಡಲೇ ಸತೀಶ್‍ನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.