ಸಮರಸ ಚಿತ್ರಸುದ್ದಿ: ಬದಿಯಡ್ಕ: ನೀರ್ಚಾಲು ಸಮೀಪದ ಪುದುಕೋಳಿಯ ವಸಂತ ಎಂಬವರು ಕಿಡ್ನಿ ವೈಫಲ್ಯಕ್ಕೊಳಗಾಗಿ ಸಂಕಷ್ಟದಲ್ಲಿದ್ದು, ಕೂಲಿ ಕೆಲಸ ನಿರ್ವಹಿಸುವ ಅವರ ಕುಟುಂಬಕ್ಕೆ ವಾರಕ್ಕೂಮ್ಮೆ ಡಯಾಲಿಸಿಸ್ ಮಾಡುತ್ತಿದ್ದರು. ಇತ್ತೀಚೆಗೆ ಕೆಲಸ ಮಾಡುವ ಸ್ಥಳದಲ್ಲಿ ಬಿದ್ದು ಕೈ ಮುರಿತವಾಗಿತ್ತು. ಇದರೊಂದಿಗೆ ಮಕ್ಕಳು ಇಲ್ಲದ ಇವರು ಕೂಲಿಯೂ ಮಾಡಲಾರದೆ ಸಂಕಷ್ಟದಲ್ಲಿದ್ದು, ಸೇವಾ ಭಾರತಿ ನೀರ್ಚಾಲು ಮತ್ತು ಶಿವಾಜಿ ಫ್ರೆಂಡ್ಸ್ ನೀರ್ಚಾಲು ಇದರ ಪದಾಧಿಕಾರಿಗಳು ಮತ್ತು ಸದಸ್ಯರು ಧನ ಸಹಾಯವನ್ನು ನೀಡಿ ನೆರವಾದರು.